ಅತ್ಯಾಚಾರ 
ದೇಶ

ಕೇರಳ: ಅತ್ಯಾಚಾರ ಆರೋಪ ಯೋಧರು ಸೇರಿ 3 ಬಂಧನ

ಲಾರ್ಡ್ಜ್ ಒಂದರಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಇಬ್ಬರು ಯೋಧರು ಸೇರಿದಂತೆ ಮೂವರನ್ನು ಎರ್ನಾಕುಲಂ ಸೆಂಟ್ರಲ್ ಪೊಲೀಸರು ಬಂಧಿಸಿದ್ದಾರೆ...

ಕೊಚ್ಚಿ: ಲಾರ್ಡ್ಜ್ ಒಂದರಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಇಬ್ಬರು ಯೋಧರು ಸೇರಿದಂತೆ ಮೂವರನ್ನು ಎರ್ನಾಕುಲಂ ಸೆಂಟ್ರಲ್ ಪೊಲೀಸರು ಬಂಧಿಸಿದ್ದಾರೆ.

ಶ್ರೀನಗರ ಮತ್ತು ಕೊಲ್ಕತ್ತಾದ ಆರ್ಮಿ ಸರಬರಾಜು ಕಾರ್ಪೋರೇಷನ್ ನ 28 ವರ್ಷದ ಮೊಹಮ್ಮದ್ ಸಲೀಂ ಮತ್ತು ಮೊಹಮ್ಮದ್ ಮಿಸ್ಬಾ ಯೋಧರು ಹಾಗೂ ಆಗ್ರದ ಪ್ಯಾರಮಿಲಿಟರಿ ಟ್ರೂಪ್ ನ 25 ವರ್ಷಧ ಇಕ್ಬಾಲ್ ಹುಸೈನ್ ನನ್ನು ಬಂಧಿಸಲಾಗಿದೆ.

ಲಕ್ಷಾದ್ವೀಪದ ನಿವಾಸಿ ಕಲ್ಪೆನಿ ಎಂಬವರು ಸಿಟಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಕಲ್ಪೆನಿ ಸಲೀಂ ಸ್ನೇಹಿತನ ಪತ್ನಿಯಾಗಿದ್ದು ಅವರಿಂದ ವಿಚ್ಛೇಧನ ಪಡೆದಿದ್ದರು. ಈ ಆರೋಪಿಗಳು ಮೂಲತಃ ಲಕ್ಷಾದ್ವೀಪದ ನಿವಾಸಿಗಳಾಗಿದ್ದಾರೆ.

ಸಲೀಂ ಮದುವೆಯಾಗುವುದಾಗಿ ನಂಬಿಸಿ ಕಳೆದ ಜನವರಿಯಲ್ಲಿ ಲಾರ್ಡ್ಜ್ ವೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದು ಅಲ್ಲದೆ ನನ್ನ ನಗ್ನ ಚಿತ್ರಗಳನ್ನು ಸೆರೆಹಿಡಿದುಕೊಂಡಿದ್ದ ಎಂದು ಕಲ್ಪೆನಿ ದೂರು ನೀಡಿದ್ದಾರೆ.

ಇಲ್ಲದೆ ಕಳೆದ ಸೋಮವಾರ ಮತ್ತೆ ಸಲೀಂ ತಾನು ಲಾರ್ಡ್ಜ್ ನಲ್ಲಿ ಒಬ್ಬನೆ ಇರುವುದಾಗಿ ಕರೆ ಮಾಡಿದ್ದು ನಾನು ಲಾರ್ಡ್ಜ್ ಗೆ ತೆರಳಿದೆ. ಈ ವೇಳೆ ಕೇರಳಕ್ಕೆ ಪ್ರವಾಸಕ್ಕೆ ಬಂದಿದ್ದ ಇಕ್ಬಾಲ್ ಮತ್ತು ಮಿಸ್ಬಾ ಸಲೀಂ ಸೇರಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಕಲ್ಪೆನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!