ಸಾಂದರ್ಭಿಕ ಚಿತ್ರ 
ದೇಶ

ಬುಲಂದ್ ಶಹರ್ ಗ್ಯಾಂಗ್ ರೇಪ್: ಪ್ರಮುಖ ಆರೋಪಿ ಸೇರಿ ಮೂವರ ಬಂಧನ

ಬುಲಂದ್ ಶಹರ್ ತಾಯಿ, ಮಗಳ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಹಾಗೂ ಇತರೆ...

ಲಖನೌ: ಬುಲಂದ್ ಶಹರ್ ತಾಯಿ, ಮಗಳ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಹಾಗೂ ಇತರೆ ಇಬ್ಬರನ್ನು ಬಂಧಿಸಿರುವುದಾಗಿ ಉತ್ತರ ಪ್ರದೇಶ ಪೊಲೀಸರು ಮಂಗಳವಾರ ಹೇಳಿದ್ದಾರೆ.
ದರೋಡೆಕೋರರ ತಂಡದ ಮುಖ್ಯಸ್ಥ ರಾಜಸ್ಥಾನ ಮೂಲದ ಸಲೀಮ್ ಬವರಿಯಾನನ್ನು ಬಂಧಿಸಿರುವುದಾಗಿ ಸೋಮವಾರ ತಡರಾತ್ರಿ ಉತ್ತರ ಪ್ರದೇಶ ಪೊಲೀಸ್ ಮಹಾ ನಿರ್ದೇಶಕರು ಟ್ವೀಟ್ ಮಾಡಿದ್ದಾರೆ.
ಮಹಿಳೆ ಹಾಗೂ ಆಕೆಯ ಅಪ್ರಾಪ್ತ ಮಗಳ ಮೇಲಿನ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಬವರಿಯಾನನ್ನು ಮೀರುತ್ ನಲ್ಲಿ ಹಾಗೂ ಆತನ ಇಬ್ಬರು ಸಹಚರರಾದ ಝುಬೇರ್ ಮತ್ತು ಸಜಿದ್ ಚಮರಿಯಾನನ್ನು ಮಾವನದಲ್ಲಿ ಎಸ್ ಟಿಎಫ್ ತಂಡ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ನಿನ್ನೆಯಷ್ಟೇ ಅಲಹಬಾದ್ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೆ ಪ್ರಕರಣವನ್ನು ಸಿಬಿಐಗೆ ವಹಿಸುವ ಬಗ್ಗೆ ಒಂದು ವಾರದಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ. ಇದರ ಬೆನ್ನಲ್ಲೇ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಜುಲೈ 29ರಂದು ಬುಲಂದ್ ಶಹರ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆಕೋರ ನೋಯಿಡಾ ಮೂಲದ ಮಹಿಳೆ ಮತ್ತು ಆಕೆಯ ಮಗಳನ್ನು ಕಾರಿನಿಂದ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಸ್ಸಾಂ: ಸೈರಾಂಗ್‌-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ; ಸ್ಥಳದಲ್ಲೇ 7 ಆನೆಗಳ ದಾರುಣ ಸಾವು

ಉ.ಕ. ನಿರ್ಲಕ್ಷ್ಯ ಮಾಡಿದ್ದೇವೆ ಎಂದು ಹೇಳುವ ನೈತಿಕ ಹಕ್ಕು ಬಿಜೆಪಿಯವರಿಗೆ ಇಲ್ಲ, 'ಗ್ಯಾರಂಟಿ ನಿಧಿ'ಯ ಶೇ. 43.63 ಭಾಗ ನೀಡಿದ್ದೇವೆ: ಸಿದ್ದರಾಮಯ್ಯ

Air India Express ಪೈಲಟ್ ನಿಂದ ಸ್ಪೈಸ್ ಜೆಟ್ ಪ್ರಯಾಣಿಕನ ಮೇಲೆ ಹಲ್ಲೆ; ರಕ್ತಸ್ರಾವದಿಂದ ನರಳಿದ ಸಂತ್ರಸ್ತ

Epstein Files ಬಿಡುಗಡೆ: ಟ್ರಂಪ್ ಬಗ್ಗೆ ಹೆಚ್ಚಿನದ್ದಿಲ್ಲ; ಕ್ಲಿಂಟನ್ ಫೋಟೋಗಳು ಬಹಿರಂಗ!

ಬಿಕ್ಲು ಶಿವ ಕೊಲೆ ಕೇಸ್ ನಲ್ಲಿ ಸಿಗದ ನಿರೀಕ್ಷಣಾ ಜಾಮೀನು: ಅಜ್ಞಾತ ಸ್ಥಳಕ್ಕೆ ತೆರಳಿದ ಬಿಜೆಪಿ ಶಾಸಕ ಭೈರತಿ ಬಸವರಾಜು?

SCROLL FOR NEXT