ರಿಯೋ ಒಲಂಪಿಕ್ಸ್: ಭಾರತೀಯ ಅಥ್ಲೀಟ್ ಗಳನ್ನು ಅವಹೇಳನ ಮಾಡಿದ ಶೋಭಾಡೇ ಗೆ ಟ್ವಿಟ್ಟರಾರತಿ
ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಆಗಾಗ್ಗೆ ಸುದ್ದಿಗೆ ಗುರಿಯಾಗುವ ಲೇಖಕಿ ಹಾಗೂ ಖ್ಯಾತ ಅಂಕಣಕಾರ್ತಿ ಶೋಭಾ ಡೇ ಟ್ವಿಟ್ಟರ್ ನಲ್ಲಿ ಮತ್ತೊಮ್ಮೆ ನಿಂದನೆಗೆ...
ನವದೆಹಲಿ: ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಆಗಾಗ್ಗೆ ಸುದ್ದಿಗೆ ಗುರಿಯಾಗುವ ಲೇಖಕಿ ಹಾಗೂ ಖ್ಯಾತ ಅಂಕಣಕಾರ್ತಿ ಶೋಭಾ ಡೇ ಟ್ವಿಟ್ಟರ್ ನಲ್ಲಿ ಮತ್ತೊಮ್ಮೆ ನಿಂದನೆಗೆ ಗುರಿಯಾಗಿದ್ದಾರೆ.
ರಿಯೋ ಒಲಂಪಿಕ್ಸ್ ನಲ್ಲಿ ಸ್ಪರ್ಧಿಸಲು ತೆರಳಿರುವ ಭಾರತೀಯ ಅಥ್ಲೀಟ್ ಗಳ ವಿರುದ್ಧ ಶೋಭಾ ಡೇ ಮಾಡಿರುವ ಟ್ವೀಟ್ ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ರಿಯೋ ಒಲಂಪಿಕ್ಸ್ ನಲ್ಲಿ ಇಂಡಿಯಾ ಟೀಮ್ ಗೋಲ್ : "ರಿಯೋ ಗೆ ತೆರಳಿ, ಸೆಲ್ಪೀ ತೆಗೆದುಕೊಳ್ಳಿ, ಬರಿಗೈಯಲ್ಲಿ ವಾಪಸ್ ಬನ್ನಿ " ಹಣ ಮತ್ತು ಅವಕಾಶ ಎರಡು ವ್ಯರ್ಥ ಎಂದು ಶೋಭಾ ಡೇ ಟ್ವೀಟ್ ಮಾಡಿದ್ದಾರೆ. ಪೋಸ್ಟ್ ಹಾಕಿದ ಒಂದು ನಿಮಿಷದಲ್ಲೇ ಶೋಭಾ ಡೇ ವಿರುದ್ಧ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತವಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.