ನವದೆಹಲಿ: ರೇಪ್ ಟು ಚಲ್ತಾ ಹೈ ರಹ್ತೆ ಹೈನ್ ( ಅತ್ಯಾಚಾರ ಕಾಮನ್ ) ಎಂದು ಹೇಳುವ ಮೂಲಕ ಕಾಂಗ್ರೆಸ್ ಹಿರಿಯ ನಾಯಕಿ ರೇಣುಕಾಚೌಧುರಿ ವಿವಾದ ಸೃಷ್ಟಿಸಿದ್ದಾರೆ.
ಬುಲಂದ್ ಶಹರ್ ನಲ್ಲಿ ನಡೆದ ತಾಯಿ ಮತ್ತು ಅಪ್ರಾಪ್ತ ಮಗಳ ಅತ್ಯಾಚಾರ ಸಂಬಂಧ ಪತ್ರಕರ್ತರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪೊಲೀಸರು ಕ್ರಮ ಕೈಗೊಳ್ಳಲು ವಿಳಂಬ ಮಾಡಿದರೇ ಅದಕ್ಕೆ ಅಧಿಕಾರ ನಡೆಸುವವರು ಹೊಣೆಯಲ್ಲ ಎಂದು ಅವರು ಹೇಳಿದ್ದಾರೆ.
ಮಾಧ್ಯಮಗಳು ಕೊಡುತ್ತಿರುವ ಪ್ರಚಾರದಿಂದ ನನ್ನ ತಲೆಕೆಟ್ಟು ಹೋಗಿದೆ. ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕ್ರಿಯೆಗಳು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.
ನಿತ್ಯವೂ ನಡೆಯುತ್ತಿರುವ ರೇಪ್‌ಗಳಿಂದ ನಾವು ಎಚ್ಚೆತ್ತುಕೊಳ್ಳಬೇಕು,'' ಎಂದರು. ಪ್ರಕರಣವೊಂದು ನಡೆದು ಕೆಲ ದಿನಗಳ ಬಳಿಕ ಕೆಲವರನ್ನು ಬಂಧಿಸಲಾಗುತ್ತದೆ. ಆ ಬಳಿಕ ಏನೂ ಆಗುವುದಿಲ್ಲ ಎಂದು ಹೇಳಿದರು. ರೇಣುಕಾ ಚೌಧರಿ ಅವರ ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.