ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಬಿಜೆಪಿ ಮುಖಂಡನ ಕಾರಿನ ಮೇಲೆ ಎಕೆ-47ನಿಂದ ಗುಂಡಿನ ದಾಳಿ

ಉತ್ತರಪ್ರದೇಶದ ಬಿಜೆಪಿ ಮುಖಂಡ ಬ್ರಿಜ್ಪಾಲ್ ತೆವತಿಯಾ ಅವರ ಕಾರಿನ ಮೇಲೆ ದುಷ್ಕರ್ಮಿಗಳು ಎಕೆ-47 ನಿಂದ ಹೆಚ್ಚು ಕಡಿಮೆ 100 ಭಾರಿ ಗುಂಡು ಹಾರಿಸಿದ್ದಾರೆ...

ಬ್ರಿಜ್ಪಾಲ್ ತಿವಾತಿಯಾ ಕಾರು
Vishwanath S
Updated On : 12 Aug 2016, 12:02 pm
ಘಾಜಿಯಾಬಾದ್: ಉತ್ತರಪ್ರದೇಶದ ಬಿಜೆಪಿ ಮುಖಂಡ ಬ್ರಿಜ್ಪಾಲ್ ತೆವತಿಯಾ ಅವರ ಕಾರಿನ ಮೇಲೆ ದುಷ್ಕರ್ಮಿಗಳು ಎಕೆ-47 ನಿಂದ ಹೆಚ್ಚು ಕಡಿಮೆ 100 ಭಾರಿ ಗುಂಡು ಹಾರಿಸಿದ್ದಾರೆ. 
ಕಳೆದ ರಾತ್ರಿ ಬ್ರಿಜ್ಪಾಲ್ ಹಾಗೂ ಅವರ ಬೆಂಬಲಿಗರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ದಾಳಿ ಮಾಡಿದ್ದು, ದಾಳಿಯಿಂದಾಗಿ ಬ್ರಿಜ್ಪಾಲ್ ಸೇರಿ ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಘಾಜಿಯಾಬಾದ್ ನ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
ಬ್ರಿಜ್ಪಾಲ್ ಅವರ ಚಲನವಲನದ ಮೇಲೆ ಕಣ್ಣಿಟ್ಟು ಈ ದಾಳಿ ನಡೆಸಲಾಗಿದೆ. ಇನ್ನು ಘಟನಾ ಸ್ಥಳದಲ್ಲಿ ಸ್ಫೋಟಕ ಮತ್ತು ಮಾರಕಾಸ್ತ್ರಗಳು, ಎಕೆ-47, 9 ಪಿಸ್ತೂಲ್ಗಳು ಸಿಕ್ಕಿವೆ ಅವುಗಳನ್ನು ವಶ ಪಡೆಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Advertisement

ಕೇಂದ್ರ ರಾಜ್ಯ ಸಚಿವ ಮಹೇಶ್ ಶರ್ಮ ಆಸ್ಪತ್ರೆಗೆ ಭೇಟಿ ನೀಡಿ ಬ್ರಿಜ್ಪಾಲ್ ಅವರ ಆರೋಗ್ಯ ವಿಚಾರಿಸಿದ್ದು, ಬ್ರಿಜ್ಪಾಲ್ ಅವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement