ಸಾಂದರ್ಭಿಕ ಚಿತ್ರ 
ದೇಶ

ಕಾಶ್ಮೀರ ಹಿಂಸಾಚಾರ ಕುರಿತು ಲೋಕಸಭೆಯಲ್ಲಿ ನಿರ್ಣಯ ಜಾರಿ: ಶಾಂತಿಗೆ ಮನವಿ

ಕಣಿವೆ ರಾಜ್ಯ ಕಾಶ್ಮೀರದಲ್ಲಿ ಸುದೀರ್ಘ ಕರ್ಫ್ಯೂ, ಹಿಂಸಾಚಾರ, ಅನೇಕ ಜೀವಗಳ ಬಲಿಯ ನಂತರ ಲೋಕಸಭೆಯಲ್ಲಿ ಶುಕ್ರವಾರ...

ನವದೆಹಲಿ: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಸುದೀರ್ಘ ಕರ್ಫ್ಯೂ, ಹಿಂಸಾಚಾರ, ಅನೇಕ ಜೀವಗಳ ಬಲಿಯ ನಂತರ ಲೋಕಸಭೆಯಲ್ಲಿ ಶುಕ್ರವಾರ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿಯಿತು. ರಾಜ್ಯದಲ್ಲಿ ತುರ್ತಾಗಿ ಕಾನೂನು, ಸುವ್ಯವಸ್ಥೆ ಕಾಪಾಡಬೇಕು. ದೇಶದ ಆಂತರಿಕ ಭದ್ರತೆ ಮತ್ತು ಸಮಗ್ರತೆ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಲೋಕಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ನಿರ್ಣಯವನ್ನು ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಓದಿದರು. ಅದರಲ್ಲಿ ಜಮ್ಮು-ಕಾಶ್ಮೀರದ ಜನರಲ್ಲಿ ಮತ್ತು ವಿಶೇಷವಾಗಿ ಯುವಕರಲ್ಲಿ ವಿಶ್ವಾಸ ಮರುಸ್ಥಾಪಿಸಲು ಅಲ್ಲಿನ ಜನತೆಗೆ ವಿಶೇಷವಾಗಿ ಮನವಿ ಮಾಡಿಕೊಂಡರು.
ಇಷ್ಟು ದಿನದಿಂದ ಅಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಅಲ್ಲಿ ನಡೆದ ಹಿಂಸಾಚಾರ, ಜನರ ಸಾವು, ನೋವಿನ ಬಗ್ಗೆ ಸದನದ ನಿರ್ಣಯದಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದರು.
ನಿರ್ಣಯಕ್ಕೆ ಪಕ್ಷಬೇಧ ಮರೆತು ಎಲ್ಲರೂ ಮೇಜು ತಟ್ಟಿ ಸ್ವಾಗತಿಸಿದರು. ದೇಶದ ಐಕ್ಯತೆ, ಸಮಗ್ರತೆ, ಭದ್ರತೆ ವಿಷಯ ಬಂದಾಗ ಯಾವುದೇ ರಾಜಿಯಿಲ್ಲ. ಇದೀಗ ಕಾಶ್ಮೀರದಲ್ಲಿ ಶಾಂತಿ, ನೆಮ್ಮದಿ ಕಾಪಾಡಲು ತುರ್ತು ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. ಜನರ ನೋವಿಗೆ ಸ್ಪಂದಿಸಬೇಕಾದ ಹೊಣೆಯಿದೆ ಎಂದರು.
ವಿರೋಧ ಪಕ್ಷದ ಸದಸ್ಯರು ಗೃಹ ಸಚಿವರ ಬದಲು ಸ್ಪೀಕರ್ ನಿರ್ಣಯ ಪತ್ರವನ್ನು ಓದಬೇಕೆಂದು ಸಲಹೆ ನೀಡಿದ್ದರಿಂದ ಸುಮಿತ್ರಾ ಮಹಾಜನ್ ಓದಿದರು.
ಇದಕ್ಕೂ ಮುನ್ನ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಶ್ಮೀರದಲ್ಲಿ ಪರಿಸ್ಥಿತಿ ಸಂಕೀರ್ಣವಾಗಿದ್ದು, ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಈ ಸಂಬಂಧ ಲೋಕಸಭೆ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.
ಈ ವಾರದ ಆರಂಭದಲ್ಲಿ ರಾಜ್ಯಸಭೆ ಕೂಡ ನಿರ್ಣಯ ಕೈಗೊಂಡು, ಕಾಶ್ಮೀರ ರಾಜ್ಯದಲ್ಲಿ ನಿರಂತರ ಹಿಂಸಾಚಾರ, ಕಫ್ರ್ಯೂ ನಡೆಯುತ್ತಿರುವುದರ ಬಗ್ಗೆ ನಿರ್ಣಯ ಅಂಗೀಕರಿಸಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!