ದೇಶ

ರಾಜ್ಯಸಭಾ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

Srinivas Rao BV

ನವದೆಹಲಿ: ಸಂಸತ್ ನ ಮುಂಗಾರು ಅಧಿವೇಶನದ ರಾಜ್ಯಸಭಾ ಕಲಾಪವನ್ನು ರಾಜ್ಯಸಭೆಯ ಅಧ್ಯಕ್ಷ ಎಂ ಹಮೀದ್ ಅನ್ಸಾರಿ ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ.

ರಾಜ್ಯಸಭೆಯ ಕಲಾಪಗಳನ್ನು ಹೆಚ್ಚು ಫಲಪ್ರದವಾಗಿತ್ತು ಎಂದಿರುವ ಹಮೀದ್ ಅನ್ಸಾರಿ, ಈ ಹಿಂದೆ ರಾಜ್ಯಸಭಾ ಕಲಾಪಗಳಿಗೆ ಉಂಟಾದ ಅಡೆತಡೆಗಳ ಬೆಗ್ಗೆ ಸದಸ್ಯರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಈ ಅಧಿವೇಶನದ ರಾಜ್ಯಸಭಾ ಕಲಾಪ ಅತಿ ಹೆಚ್ಚು ಫಲಪ್ರದವಾಗಿತ್ತು ಎಂದು ಹಮೀದ್ ಅನ್ಸಾರಿ ತಿಳಿಸಿದ್ದು, ರಾಜ್ಯಸಭೆಯಲ್ಲಿ ನಡೆದ ರಚನಾತ್ಮಕ ಚರ್ಚೆ, ಮಸೂದೆಗಳ ಅಂಗೀಕಾರದಿಂದ ಸಂತಸಗೊಂಡಿದ್ದಾಗಿ ತಿಳಿಸಿದ್ದಾರೆ. ಅಧಿವೇಶನದಲ್ಲಿ 112 ಗಂಟೆಗಳು ರಾಜ್ಯಸಭೆ ಕೆಲಸ ಮಾಡಿದ್ದು, 300 ಪ್ರಮುಖ ಪ್ರಶ್ನೆಗಳನ್ನು ಚರ್ಚಿಸಲಾಗಿದೆ, ಕಲಾಪದ ಶೂನ್ಯ ವೇಳೆಯಲ್ಲಿ ಲ್ಲಿ 120 ಪ್ರಶ್ನೆಗಳು ಎದುರಾಗಿದ್ದು ಈ ಪೈಕಿ 21 ಕ್ಕೆ ಸಚಿವರು ತಕ್ಷಣವೇ ಉತ್ತರಿಸಿದ್ದರೆ, 91 ಕ್ಕೆ ನಂತರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಹಮೀದ್ ಅನ್ಸಾರಿ ತಿಳಿಸಿದ್ದಾರೆ. ಜು.18 ರಿಂದ ಪ್ರಾರಂಭವಾದ ಅಧಿವೇಶನದಲ್ಲಿ  ಜಿಎಸ್ ಟಿ ಸೇರಿದಂತೆ ಕೇಂದ್ರ ಸರ್ಕಾರದ 14 ಮಸೂದೆಗಳನ್ನು ಅಂಗೀಕರಿಸಲಾಗಿದೆ ಎಂದು ಹಮೀದ್ ಅನ್ಸಾರಿ ತಿಳಿಸಿದ್ದಾರೆ.

SCROLL FOR NEXT