ಪ್ರತಿ ಭಾನುವಾರ ಬಿಎಸ್ ಎನ್ ಎಲ್ ನಿಂದ ಮಾಡುವ ಎಲ್ಲಾ ಕರೆಗಳು ಉಚಿತ
ಭಾರತ ಸಂಚಾರ ನಿಗಮದ ಸ್ಥಿರ ದೂರವಾಣಿಯಿಂದ ಯಾವುದೇ ನೆಟ್ವರ್ಕ್ನ ಮೊಬೈಲ್ ಮತ್ತು ಸ್ಥಿರ ದೂರವಾಣಿಗೆ ಮಾಡುವ ಕರೆಗಳಿಗೆ ಎಲ್ಲಾ ಭಾನುವಾರ
ನವದೆಹಲಿ: ಭಾರತ ಸಂಚಾರ ನಿಗಮವದ ಸ್ಥಿರ ದೂರವಾಣಿಯಿಂದ ಯಾವುದೇ ನೆಟ್ವರ್ಕ್ನ ಮೊಬೈಲ್ ಮತ್ತು ಸ್ಥಿರ ದೂರವಾಣಿಗೆ ಮಾಡುವ ಕರೆಗಳಿಗೆ ಎಲ್ಲಾ ಭಾನುವಾರ ಅನಿಯಮಿತ ಉಚಿತ ಸೇವೆ ದೊರೆಯಲಿದೆ. ಈ ಸಂಬಂಧ ಬಿಎಸ್ಎನ್ಎಲ್ ಅಧಿಕೃತ ಸುತ್ತೋಲೆ ಹೊರಡಿಸಿದ್ದು, ನಾಳೆಯಿಂದಲೇ ಜಾರಿಗೆ ಬರಲಿದೆ.
ಪಾನ್ ಇಂಡಿಯಾ ಆಧಾರದ ಮೇಲೆ ಅನಿಯಮಿತ ಉಚಿತ ಕರೆ ಸೇವೆಯನ್ನು ಬಿಎಸ್ಎನ್ಎಲ್ ಒದಗಿಸುತ್ತಿದೆ. ಇದರ ಜೊತೆಗೆ ರಾತ್ರಿ 9ರಿಂದ ಬೆಳಗ್ಗೆ 7ರವರೆಗೆ ಅನಿಯಮಿತ ಉಚಿತ ಕರೆ ಯೋಜನೆ ಕೂಡ ಈಗಾಗಲೇ ಜಾರಿಯಲ್ಲಿದೆ.
ಈ ಸಂಬಂಧ ಎಲ್ಲ ನೊಂದಾಯಿತ ಮೊಬೈಲ್ ಸಂಖ್ಯೆಗೆ ಎಸ್ಸೆಮ್ಮೆಸ್ ಸಂದೇಶ ರವಾನಿಸಿದ್ದು , ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರವನ್ನೂ ಕೂಡ ನೀಡಲಾಗುತ್ತಿದೆ ಎಂದು ಬಿಎಸ್ಎನ್ಎಲ್ ಹೊರಡಿಸಿರುವ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.