ಸಾಂದರ್ಭಿಕ ಚಿತ್ರ 
ದೇಶ

ಹೋಟೆಲ್ ನಲ್ಲಿ ಗನ್ ತೋರಿಸಿ ಡ್ಯಾನ್ಸರ್ ಮೇಲೆ ಗ್ಯಾಂಗ್ ರೇಪ್

ಉತ್ತರ ಪ್ರದೇಶದಲ್ಲಿ ಮತ್ತೊಂದು ಹೀನ ಕೃತ್ಯ ನಡೆದಿದ್ದು, ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕೊನೆಯೇ ಇಲ್ಲದಂತಾಗಿದೆ.

ಲಖನೌ: ಉತ್ತರ ಪ್ರದೇಶದಲ್ಲಿ ಮತ್ತೊಂದು ಹೀನ ಕೃತ್ಯ ನಡೆದಿದ್ದು, ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕೊನೆಯೇ ಇಲ್ಲದಂತಾಗಿದೆ.
ಲಖನೌನಿಂದ 20 ಕಿ.ಮೀ.ದೂರದಲ್ಲಿರುವ ಬಂಥರದಲ್ಲಿರುವ ಹೋಟೆಲ್ ವೊಂದರಲ್ಲಿ ನಾಲ್ವರು ವ್ಯವಸ್ಥಾಪಕರು 25 ವರ್ಷದ ಡ್ಯಾನ್ಸರ್ ಗೆ ಗನ್ ತೋರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದೆ.
ಪ್ರತಿಷ್ಠಿತ ಆರ್ಯುವೇದಿಕ ಡ್ರಗ್ ಕಂಪನಿಯ ವ್ಯವಸ್ಥಾಪಕರಾಗಿದ್ದ ನಾಲ್ವರು ಕಾಮುಕರು ಕಚೇರಿಯ ಪಾರ್ಟಿಯ ನಂತರ ಕುಡಿದ ಮತ್ತಿನಲಿ ಹೋಟೆಲ್ ನ ರೂಮ್ ನಲ್ಲಿ ಡ್ಯಾನ್ಸರ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವುದಾಗಿ ಮಹಿಳೆ ಆರೋಪಿಸಿದ್ದಾರೆ.
ಅತ್ಯಾಚಾರಕ್ಕೆ ಒಳಗಾದ ಡ್ಯಾನ್ಸರ್ ಹಾಗೂ ಇತರೆ ಇಬ್ಬರು ಮಹಿಳೆಯರು ಕಂಪನಿ ಆಯೋಜಿಸಿದ್ದ ಪ್ರತಿನಿಧಿಗಳ ಪಾರ್ಟಿಯಲ್ಲಿ ನೃತ್ಯ ಪ್ರದರ್ಶನ ನೀಡಲು ಬಂದಿದ್ದರು. ಹೋಟೆಲ್ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಪ್ರದರ್ಶನದ ನಂತರ ಬೆಳಗಿನ ಜಾವ 1.30ರ ಸುಮಾರಿಗೆ ತುಂಬಾ ಕುಡಿದಿದ್ದ ವ್ಯವಸ್ಥಾಪಕರು ನಮ್ಮೊಂದಿಗೆ ಅಸಭ್ಯವಾಗಿ ನಡೆದುಕೊಂಡರು ಎಂದು ಸಹ ನೃತ್ಯಗಾರ್ತಿ ಆರೋಪಿಸಿದ್ದಾರೆ.
ಇತರೆ ಡ್ಯಾನ್ಸರ್ ಗಳು ತೆರಳಿದ ನಂತರ ವೇತನದ ಬಗ್ಗೆ ಮಾತನಾಡಬೇಕು ಎಂದು ರೂಮಿಗೆ ಕರೆಸಿಕೊಂಡ ನಾಲ್ವರು ವ್ಯವಸ್ಥಾಪಕರು ತನಗೆ ಗನ್ ತೋರಿಸಿ ಸಾಮೂಹಿಕಿ ಅತ್ಯಾಚಾರ ಎಸಗಿರುವುದಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಬಂಥರ ಪೊಲೀಸರು, ಆರೋಪಿಗಳಾದ ಸತ್ಯವೀರ್ ಸಿಂಗ್, ದೇವರಾಜ್ ಸಿಂಗ್, ರಾಷ್ಟ್ರೀಯ ಭೂಷಣ್ ಭಾರ್ತಿ ಹಾಗೂ ಪರೇಶ್ ತೋಮರ್ ಅವರನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?