ದೇಶ

ಬಿಜೆಪಿ ಮುಖಂಡ ಬ್ರಿಜ್ ಪಾಲ್ ಮೇಲೆ ಗುಂಡಿನ ದಾಳಿ ಪ್ರಕರಣ: ನಾಲ್ವರ ಬಂಧನ

Lingaraj Badiger
ಗಾಜಿಯಾಬಾದ್: ಬಿಜೆಪಿಯ ಹಿರಿಯ ಮುಖ೦ಡ ಬ್ರಿಜ್‍ಪಾಲ್ ತಿಯೋತೈ ಅವರ ಮೇಲೆ ನಡೆದ ಗು೦ಡಿನ ದಾಳಿ ಪ್ರಕರಣವನ್ನು ಬೇಧಿಸಿರುವುದಾಗಿ ಹೇಳಿಕೊಂಡಿರುವ ಉತ್ತರ ಪ್ರದೇಶ ಪೊಲೀಸರು, ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ತಿಯೋತೈ ಅವರ ಗ್ರಾಮದ ನಾಲ್ವರು ಶೂಟರ್ ಗಳನ್ನು ಬಂಧಿಸಲಾಗಿದೆ. 17 ವರ್ಷಗಳ ಹಿಂದೆ ನಡೆದ ಕೊಲೆಯೊಂದರ ಪ್ರತೀಕಾರಕ್ಕಾಗಿ ಈ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸದ್ದಾರೆ.
ಬಂಧಿತ ಆರೋಪಿಗಳನ್ನು ರಾಹುಲ್ ತ್ಯಾಗಿ(26), ರಾಮ್ ಕುಮಾರ್(25), ನಿಶಾಂತ್ ಸಿಂಗ್(25) ಹಾಗೂ ಜಿತೇಂದ್ರ ಅಲಿಯಾಸ್ ಪೊಪೆ(40) ಎಂದು ಗುರುತಿಸಲಾಗಿದೆ. ಅಲ್ಲದೆ ದಾಳಿಯಲ್ಲಿ ಭಾಗಿಯಾಗಿರುವ ಇತರೆ ಎಂಟು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಮೀರುತ್ ವಲಯ ಪೊಲೀಸ್ ಮಹಾ ನಿರ್ದೇಶಕ ಸುಜೀತ್ ಪಾಂಡೆ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕಳೆದ ಗುರುವಾರ ರಾತ್ರಿ ಬ್ರಿಜ್ ಪಾಲ್ ಮುರದ್ ನಗರದಿ೦ದ ಗಾಜಿಯಾಬಾದ್‍ಗೆ ಆಗಮಿಸುತ್ತಿದ್ದ ವೇಳೆ ಫಾ ಚೂ೯ನರ್ ಕಾರಿನಲ್ಲಿ ಬ೦ದ ದುಷ್ಕಮಿ೯ಗಳು ರಯೋಲಿ ಬಳಿ ಅವರಿದ್ದ ಸ್ಕಾಪಿ೯ಯೋ ಕಾರನ್ನು ಅಡ್ಡಗಟ್ಟಿ ಕಾರಿನ ಮೇಲೆ ಗು೦ಡಿನ ಮಳೆಗರೆದಿದ್ದಾರೆ. ದುಷ್ಕಮಿ೯ಗಳು ಎ.ಕೆ47 ಸೇರಿದ೦ತೆ ವಿವಿಧ ಬ೦ದೂಕುಗಳಿ೦ದ ಗು೦ಡು ಹಾರಿಸಿ, ಪರಾರಿಯಾಗಿದ್ದಾರು. ಬಳಿಕ ಕಾರಿನಲ್ಲಿದ್ದ ಬ್ರಿಜ್‍ಪಾಲ್ ಸೇರಿದ೦ಥೆ ಅವರ ಜತೆಗಿದ್ದ ಆರು ಜನರು ಗ೦ಭೀರವಾಗಿ ಗಾಯಗೊ೦ಡಿದ್ದಾರು. 
ಸದ್ಯ ಬ್ರಿಜ್‍ಪಾಲ್ ನೋಯಿಡಾದ ಆಸ್ಪತ್ರೆಯ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎ೦ದು ವೈದ್ಯರು ತಿಳಿಸಿದ್ದಾರೆ.
SCROLL FOR NEXT