ನೀಟ್ ಟಾಪರ್ ಗುಜರಾತ್ ನ ಹೆಟ್ ಶಾ
ನವದೆಹಲಿ: ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ದೇಶಾದ್ಯಂತ ಏಕರೂಪ ಪರೀಕ್ಷೆ ನೀಟ್ (ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರನ್ಸ್ ಟೆಸ್ಟ್) ನ ಫಲಿತಾಂಶವನ್ನು ನಿನ್ನೆ(ಮಂಗಳವಾರ) ಸಿಬಿಎಸ್ ಇ ಪ್ರಕಟಿಸಿದೆ. ಸುಪ್ರೀಂ ಕೋರ್ಟ್ ನ ನಿರ್ದೇಶನದಂತೆ ಎರಡು ಹಂತಗಳಲ್ಲಿ ನಡೆಸಲಾಗಿದ್ದ ಪರೀಕ್ಷಾ ಫಲಿತಾಂಶವನ್ನು ಒಟ್ಟಿಗೆ ಪ್ರಕಟಿಸಲಾಗಿದೆ.
ಗುಜರಾತ್ ನ ಹೆಟ್ ಶಾ ದೇಶಕ್ಕೆ ಪ್ರಥಮರಾಗಿ ಹೊರಹೊಮ್ಮಿದ್ದಾರೆ. ಮೇ ಮತ್ತು ಜುಲೈ ತಿಂಗಳಲ್ಲಿ ನಡೆಸಲಾದ ಎರಡು ಹಂತಗಳ ಪರೀಕ್ಷೆಯಲ್ಲಿ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದು, ಅವರಲ್ಲಿ 4 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಹುಡುಗಿಯರೇ ಹುಡುಗರಿಗಿಂತ ಫಲಿತಾಂಶದಲ್ಲಿ ಮುಂದಿದ್ದಾರೆ ಎಂದು ಸಿಬಿಎಸ್ ಇ ತಿಳಿಸಿದೆ.
ಒಟ್ಟು 720 ಅಂಕಗಳಲ್ಲಿ 685 ಅಂಕ ಗಳಿಸುವ ಮೂಲಕ ಹೆಟ್ ಶಾ ದೇಶಕ್ಕೆ ಮೊದಲಿಗನಾದರೆ, ಏಕಾಂಶ ಗೋಯಲ್(682 ಅಂಕ), ನಿಖಿಲ್ ಬಾಜಿಯಾ(678 ಅಂಕ) ಗಳಿಸುವ ಮೂಲಕ ದ್ವಿತೀಯ, ತೃತೀಯ ಅಂಕ ಗಳಿಸಿದ್ದಾರೆ.
www.aipmt.nic.in, www.cbse.nic.in ಮತ್ತು www.cbseresults.nic.in ಮೂಲಕ ಫಲಿತಾಂಶ ವೀಕ್ಷಿಸಬಹುದು. ಅಲ್ಲದೆ ಕೇಂದ್ರದ ಡಿಜಿಲಾಕರ್ ವೆಬ್ ಸೈಟ್ http://results.digilocker.gov.in ಮೂಲಕ ಕೂಡ ರಿಸಲ್ಟ್ ನೋಡಬಹುದು.
ದೇಶ ಮಟ್ಟದಲ್ಲಿ ಶೇಕಡಾ 15ರಷ್ಟು ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಸಿಬಿಎಸ್ ಇ ನೀಟ್ ರ್ಯಾಂಕ್ ಪತ್ರವನ್ನು ಡಿಜಿ ಲಾಕರ್ ಮೂಲಕ ಕಳುಹಿಸಲಿದೆ. ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ವಿದ್ಯಾರ್ಥಿಗಳು ಇನ್ನು ಸಂಬಂಧಪಟ್ಟ ಸಲಹಾಧಿಕಾರಿಗಳ ಬಳಿ ಪ್ರವೇಶ ಪ್ರಕ್ರಿಯೆಯ ವಿಧಿವಿಧಾನಗಳನ್ನು ಭರ್ತಿ ಮಾಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics