ಮುಖ್ಯಮಂತ್ರಿಯನ್ನು ಎತ್ತುಕೊಂಡು ಸಾಗುತ್ತಿರುವ ಪೊಲೀಸರು 
ದೇಶ

ಪ್ರವಾಹ ಪೀಡಿತ ಪ್ರದೇಶದಲ್ಲಿ ಮುಖ್ಯಮಂತ್ರಿಯನ್ನು ಹೊತ್ತು ಸಾಗಿದ ಪೊಲೀಸರು: ಫೋಟೋ ವೈರಲ್

ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಬಂದಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಪೊಲೀಸರು ಎತ್ತುಕೊಂಡು,..

ಭೂಪಾಲ್: ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಬಂದಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಪೊಲೀಸರು ಎತ್ತುಕೊಂಡು ಹೋಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಿಎಂ ಶಿವರಾಜ್ ಸಿಂಗ್ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು, ಪನ್ನಾ ಜಿಲ್ಲೆಯ ಅಮನ್‍ಗಂಜ್ ತೆಹಸಿಲ್‍ ನಲ್ಲಿ ಘಟನೆ ನಡೆದಿದೆ. ಮೊಬೈಲ್‍ನಲ್ಲಿ ತೆಗೆಯಲಾಗಿರುವ ಈ ಫೋಟೋದಲ್ಲಿ 57 ವರ್ಷದ ಶಿವರಾಜ್ ಸಿಂಗ್ ಇಬ್ಬರು ಪೊಲೀಸರ ಹೆಗಲ ಮೇಲೆ ಕೈ ಹಾಕಿದ್ದು ಆ ಪೊಲೀಸರು ಮೊಣಕಾಲುದ್ದ ಇರುವ ನೀರಿನಲ್ಲಿ ಸಿಎಂರನ್ನು ಎತ್ತಿಕೊಂಡು ಹೋಗುತ್ತಿದ್ದಾರೆ.

ಸರ್ಕಾರದ ಮೂಲಗಳ ಮಾಹಿತಿಯ ಪ್ರಕಾರ ಪ್ರವಾಹದ ನೀರಿನಲ್ಲಿ ನಡೆದು ಸಿಎಂಗೆ ತೊಂದರೆಯಾಗಬಾರದು ಅಥವಾ ಹಾವುಗಳಿಂದ ಕಚ್ಚಿಸಿಕೊಳ್ಳಬಹುದು ಎಂಬ ಮುನ್ನೆಚರಿಕೆಯಿಂದ ಅವರನ್ನು ಎತ್ತಿಕೊಂಡು ಹೋಗಲು ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕದ ನಿರ್ಬಂಧ ಲೆಕ್ಕಿಸದೇ ಭಾರತ ರಷ್ಯಾ ತೈಲ ಆಮದು ಮುಂದುವರಿಸಲಿದೆ: ಸುಜಾತಾ ಶರ್ಮಾ

ಭಾರತದ ಮೊದಲ ಬುಲೆಟ್ ರೈಲಿನ 'ಫಸ್ಟ್ ಲುಕ್' ರಿಲೀಸ್‌: ಸಂಚಾರ ಯಾವಾಗಿಂದ ಆರಂಭ?

'ಅಮ್ಮ ಕ್ಯಾಂಟೀನ್‌' ಆಧುನೀಕರಿಸಲು ತಮಿಳುನಾಡು ಸಿಎಂ ವಿಜಯ್ ಆದೇಶ; ಅಚ್ಚರಿ ಮೂಡಿಸಿದ ದಳಪತಿ ನಡೆ

Bengaluru Rains: ವರುಣಾರ್ಭಟಕ್ಕೆ ನದಿಯಂತಾದ ರಸ್ತೆಗಳು; 5 ದಿನ ಮಳೆ ಸಾಧ್ಯತೆ, ತಾಪಮಾನ ಗಣನೀಯ ಇಳಿಕೆ: ಹವಾಮಾನ ಇಲಾಖೆ

Indian Stock Market: ಚೇತರಿಸಿಕೊಂಡ Sensex 77 ಅಂಕ ಏರಿಕೆ, ರೂಪಾಯಿ ಮೌಲ್ಯ 96.35ಕ್ಕೆ ಕುಸಿತ, ಕಚ್ಚಾತೈಲ ಬೆಲೆ ಏರಿಕೆ!

SCROLL FOR NEXT