ದೇಶ

ಕಾಶ್ಮೀರ ಹಿಂಸಾಚಾರ; ಪಾಕ್ ದೂಷಣೆಯಲ್ಲಿ ಮುಳುಗಿರುವ ಕೇಂದ್ರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ: ಆ್ಯಂಟನಿ

Manjula VN

ತಿರುವನಂತಪುರಂ: ಕಾಶ್ಮೀರ ಹಿಂಸಾಚಾರ ವಿಚಾರ ಸಂಬಂಧ ಕೇಂದ್ರ ಸರ್ಕಾರ ಪಾಕಿಸ್ತಾನವನ್ನು ದೂಷಿಸುವುದರಲ್ಲೇ ಮುಳುಗಿ ಹೋಗಿದ್ದು, ಸೂಕ್ತ ರೀತಿಯ ಕ್ರಮವನ್ನು ಮಾತ್ರ ಕೈಗೊಳ್ಳುತ್ತಿಲ್ಲ ಎಂದು ಮಾಜಿ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಯವರು ಮಂಗಳವಾರ ಹೇಳಿದ್ದಾರೆ.

ಕಾಶ್ಮೀರ ವಿವಾದಕ್ಕೆ ಕೇಂದ್ರ ಸರ್ಕಾರ ರಾಜಕೀಯ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ವಿವಾದ ಕುರಿತು ಸರ್ಕಾರ ಸರ್ವ ಪಕ್ಷ ಸಭೆ ನಡೆಸಬೇಕು. ನಂತರ ರಾಜಕೀಯ ಪರಿಹಾರವನ್ನು ಕಂಡುಕೊಳ್ಳಬೇಕು. ಈ ವಿಚಾರದಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸಬಾರದು. ಕಾಶ್ಮೀರದಲ್ಲಿನ ಜನತೆ ಹಾಗೂ ಅಲ್ಲಿನ ಯುವಕರ ಮನಸ್ಸನ್ನು ಗೆಲ್ಲಬೇಕಿದೆ ಎಂದು ಹೇಳಿದ್ದಾರೆ.

ಕಾಶ್ಮೀರದ ವಿಚಾರದಲ್ಲಿ ಸಾಕಷ್ಟು ಸಮಸ್ಯೆಗಳುಂಟಾಗುತ್ತಿರುವುದು ನನಗೆ ಗೊತ್ತಿದೆ. ಗಡಿಯಲ್ಲಿ ಪಾಕಿಸ್ತಾನ ಸೈನಿಕರು ಸಮಸ್ಯೆ ಉಂಟು ಮಾಡುತ್ತಿರುವುದು ಗೊತ್ತಿದೆ. ಈ ರೀತಿಯ ಸಮಸ್ಯೆಯನ್ನು ಅವರು ಮುಂದುವರೆಸುತ್ತಲೇ ಇರುತ್ತಾರೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಕ್ರಮ ಕೈಗೊಳ್ಳದೆಯೇ ಯಾವಾಗಲೂ ಪಾಕಿಸ್ತಾನವನ್ನೇ ದೂಷಿಸುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ವಿವಾದಿತ ಈ ವಿಚಾರದ ಬಗ್ಗೆ ಜನರು ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಬಾರದು ಎಂದು ತಿಳಿಸಿದ್ದಾರೆ.

SCROLL FOR NEXT