ದೇಶ

ಯುಪಿಎಸ್ ಸಿ ಪರೀಕ್ಷೆಗೆ 26 ಗರಿಷ್ಠ ವಯೋಮಿತಿ?

Srinivas Rao BV

ನವದೆಹಲಿ: ಲೋಕಸೇವಾ ಆಯೋಗಕ್ಕೆ ನಡೆಸಲಾಗುವ ಪರೀಕ್ಷೆ ಬರೆಯಲು ಇರುವ ಗರಿಷ್ಠ ವಯೋಮಿತಿಯನ್ನು 26 ವರ್ಷಕ್ಕೆ ಇಳಿಕೆ ಮಾಡುವ ಸಾಧ್ಯತೆ ಇದೆ.

ಪ್ರಸ್ತುತ ಯುಪಿಎಸ್ ಸಿ ಪರೀಕ್ಷೆಯನ್ನು ತೆಗೆದುಕೊಳ್ಳುವುದಕ್ಕೆ ಇರುವ ಗರಿಷ್ಠ ವಯೋಮಿತಿ 32 ವರ್ಷವಾಗಿದ್ದು, ಇದನ್ನು 26 ವರ್ಷಕ್ಕೆ ಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ಎಕೆನಾಮಿಕ್ ಟೈಮ್ಸ್ ವರದಿ ಪ್ರಕಟಿಸಿದೆ. ಆದರೆ ಇದು ಸಾಮಾನ್ಯ ವರ್ಗದವರಿಗೆ ಮಾತ್ರ ಅನ್ವಯವಾಗಲಿದ್ದು ಯುಪಿಎಸ್ ಸಿ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು ಇಳಿಕೆಮಾಡುವ ಪ್ರಸ್ತಾವನೆ ಮುಂದಿಡಲಾಗಿಲ್ಲ, 37 ವರ್ಷ ಗರಿಷ್ಠ ವಯೋಮಿತಿ ಮುಂದುವರೆಯಲಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.
ಐಎಎಸ್, ಐಎಫ್ಎಸ್ ಹಾಗೂ ಐಪಿಎಸ್ ಗಳಿಗೆ ನೇಮಕ ಮಾಡಲು 32 ವರ್ಷ ತೀರಾ ಗರಿಷ್ಠ ವಯೋಮಿತಿಯಾಗಿರುವ ಹಿನ್ನೆಲೆಯಲ್ಲಿ 32 ನ್ನು 26 ಕ್ಕೆ ಇಳಿಕೆ ಮಾಡಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನು ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಕೈಗೊಂಡಿಲ್ಲ. 

SCROLL FOR NEXT