ಟರ್ಕಿಯಲ್ಲಿ ಕಾರ್ ಬಾಂಬ್ ಸ್ಫೋಟ (ಟ್ವಿಟರ್ ಚಿತ್ರ) 
ದೇಶ

ಟರ್ಕಿಯಲ್ಲಿ ಮತ್ತೆ ಉಗ್ರರ ಅಟ್ಟಹಾಸ; ಕಾರ್ ಬಾಂಬ್ ದಾಳಿಯಲ್ಲಿ 9 ಮಂದಿ ಸಾವು

ಗಲಭೆ ಪೀಡಿತ ಟರ್ಕಿಯಲ್ಲಿ ಮತ್ತೆ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದು, ಪೊಲೀಸ್ ಪ್ರಧಾನ ಕಚೇರಿ ಮೇಲೆ ಕಾರ್ ಬಾಂಬ್ ದಾಳಿ ನಡೆಸಿ ಕನಿಷ್ಠ 9 ಮಂದಿಯ ಸಾವಿಗೆ ಕಾರಣರಾಗಿದ್ದಾರೆ.

ಇಸ್ತಾನ್ ಬುಲ್: ಗಲಭೆ ಪೀಡಿತ ಟರ್ಕಿಯಲ್ಲಿ ಮತ್ತೆ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದು, ಪೊಲೀಸ್ ಪ್ರಧಾನ ಕಚೇರಿ ಮೇಲೆ ಕಾರ್ ಬಾಂಬ್ ದಾಳಿ ನಡೆಸಿ ಕನಿಷ್ಠ 9 ಮಂದಿಯ ಸಾವಿಗೆ  ಕಾರಣರಾಗಿದ್ದಾರೆ.

ಆಗ್ನೇಯ ಟರ್ಕಿಯ ಸಿರಿಯಾ-ಟರ್ಕಿ ಗಡಿಯಲ್ಲಿರುವ ಸಿಜ್ರೆ ನಗರದಲ್ಲಿ ದಾಳಿ ನಡೆದಿದ್ದು, ಸಿಜ್ರೆಯಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಉಗ್ರರು ಕಾರ್ ಬಾಂಬ್ ದಾಳಿ  ನಡೆಸಿದ್ದಾರೆ. ಘಟನೆಯಲ್ಲಿ ಕನಿಷ್ಟ 9 ಮಂದಿ ಸಾವಿಗೀಡಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಸೇನಾಸ್ಪತ್ರೆಗೆ ದಾಖಲಿಸಲಾಗಿದೆ. ಟರ್ಕಿ  ಮಾಧ್ಯಮಗಳಲ್ಲಿ ಕಾರ್ ಬಾಂಬ್ ಸ್ಫೋಟದ ದೃಶ್ಯಾವಳಿಗಳು ಪ್ರಸಾರವಾಗಿದ್ದು, ಬಾಂಬ್ ಸ್ಫೋಟದ ರಭಸಕ್ಕೆ ಸುತ್ತಮುತ್ತಲಿನ ಹತ್ತಾರು ಮನೆಗಳು ಜಖಂಗೊಂಡಿವೆ.

ಸೇನಾಸ್ಪತ್ರೆ ಮೂಲಗಳ ಪ್ರಕಾರ ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿ, 64 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಜವಾಬ್ಗಾರಿಯನ್ನು ಈ ವರೆಗೂ ಯಾವುದೇ ಉಗ್ರ  ಸಂಘಟನೆ ಹೊತ್ತಿಲ್ಲವಾದರೂ, ಕುರ್ದಿಶ್ ನ ಸಾಂಪ್ರದಾಯಿಕ ಉಗ್ರಗಾಮಿ ಸಂಘಟನೆ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ (ಪಿಕೆಕೆ) ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ.

ಕಳೆದ ಜುಲೈ ತಿಂಗಳನಿಂದ ಈ ಪ್ರಾಂತ್ಯದಲ್ಲಿ ಸ್ಥಳೀಯ ಉಗ್ರಗಾಮಿ ಸಂಘಟನೆಗಳ ಹಾವಳಿ ಜೋರಾಗಿದ್ದು, ಸೈನಿಕರು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ಸಾಮಾನ್ಯ  ಎನ್ನುವಂತಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮನೆಗಳಿಗೆ ಎಲ್‌ಪಿಜಿ, ವಾಹನಗಳಿಗೆ ಸಿಎನ್‌ಜಿ ಪೂರೈಕೆ 100 ಪರ್ಸೆಂಟ್ ಗ್ಯಾರಂಟಿ: ಕೇಂದ್ರ ಭರವಸೆ

ಗೃಹ ಬಳಕೆ ಎಲ್ ಪಿಜಿಗೆ ಆದ್ಯತೆ, ಕೈಗಾರಿಕಾ ಅನಿಲ ಬಳಕೆ ಶೇ. 50 ರಷ್ಟು ಕಡಿತಗೊಳಿಸಿದ ಗುಜರಾತ್

ಸರ್ಕಾರಿ ವೈದ್ಯರ ಮುಷ್ಕರ: ಶೀಘ್ರ ಸಮಸ್ಯೆ ಪರಿಹರಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ

ಡಿಕೆಶಿಗೆ ಉಜ್ವಲ ರಾಜಕೀಯ ಭವಿಷ್ಯವಿದೆ ಎನ್ನುತ್ತಾ ಹೊಸ ಟ್ವಿಸ್ಟ್ ನೀಡಿದ ಸಿಎಂ ಸಿದ್ದರಾಮಯ್ಯ!

'ನಾವಿರೋದ್ರಿಂದ ಹಿಂದೂಗಳು ಸುರಕ್ಷಿತ.. ಇಲ್ಲ ಅಂದ್ರೆ ಆ ಸಮುದಾಯದವ್ರು ಮುಗಿಸಿಬಿಡುತ್ತಿದ್ದರು': Mamata Banerjee ವಿವಾದಾತ್ಮಕ ಹೇಳಿಕೆ, ಬಿಜೆಪಿ ಕಿಡಿ

SCROLL FOR NEXT