ರಾಜಮಾತೆ ಪದ್ಮಿನಿ ದೇವಿಯೊಂದಿಗೆ ಪ್ರತಿಭಟನಾಕಾರರು
ಜೈಪುರ: ರಾಜ್ ಮಹಲ್ ಅರಮನೆ ಸಂಬಂಧ ಜೈಪುರ ಅಭಿವೃದ್ಧಿ ಪ್ರಾಧಿಕಾರ(ಜೆಡಿಎ) ವಿರುದ್ಧ ಜೈಪುರ ರಾಜಮನೆತನದ ರಾಜಮಾತೆ ಪದ್ಮಿನಿ ದೇವಿ ಅವರು ಸಾವಿರಾರು ಬೆಂಬಲಿಗರೊಂದಿಗೆ ಗುರುವಾರ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.
ಜೆಡಿಎ ಅಧಿಕಾರಿಗಳು ಅರಮನೆಯ ಮುಖ್ಯ ದ್ವಾರವನ್ನು ಬಂದ್ ಮಾಡುವ ರಾಜಮನೆತನಕ್ಕೆ ಅಗೌರವ ತೋರಿದ್ದಾರೆ ಎಂದು ಪದ್ಮಿನಿ ದೇವಿ ಅವರು ಆರೋಪಿಸಿದ್ದಾರೆ. ಮುಖ್ಯ ದ್ವಾರ ತನ್ನ ಜಾಗದಲ್ಲಿದೆ ಎಂದು ಕಳೆದ ವಾರ ಜೆಡಿಎ ಅದನ್ನು ಬಂದ್ ಮಾಡಿತ್ತು.
ಇಂದು ಜೆಡಿಎ ವಿರುದ್ಧ ಬಲಪ್ರದರ್ಶನಕ್ಕೆ ಮುಂದಾದ ರಾಜಮಾತೆ ನಗರದ ಅರಮನೆಯಿಂದ ತ್ರಿಪೊಲಿಯಾ ಗೇಟ್ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ತೆರೆದ ವಾಹನದಿಂದಲೇ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪದ್ಮಿನಿ ದೇವಿ ಅವರು, ಇಂದು ಇಡೀ ಜೈಪೂರ ನಮ್ಮೊಂದಿಗಿದೆ. ರಾಜ್ ಮಹಲ್ ಅರಮನೆಗೆ ಸಂಬಂಧಿಸಿದಂತೆ ಜೆಡಿಎ ಹಸ್ತಕ್ಷೇಪದಿಂದ ನನಗೆ ತುಂಬಾ ನೋವಾಗಿದೆ ಎಂದರು.