ನವದೆಹಲಿ: ಸೆಕ್ಸ್ ಸ್ಕ್ಯಾಂಡ್ ನಲ್ಲಿ ಸಿಲುಕಿರುವ ವಜಾಗೊಂಡಿರುವ ಆಪ್ ಮಾಜಿ ಸಚಿವ ಸಂದೀಪ್ ಕುಮಾರ್ ಅವರು ಇದೀಗ ಪ್ರಕರಣಕ್ಕೆ ಜಾತಿಯ ಬಣ್ಣ ನೀಡಿದ್ದು, 'ನಾನು ದಲಿತ ಎಂಬ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಗುರುವಾರ ಆರೋಪಿಸಿದ್ದಾರೆ.
ಸೆಕ್ಸ್ ಸೀಡಿಗೆ ಸಂಬಂಧಿಸಿದಂತೆ ಇಂದು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂದೀಪ್ ಕುಮಾರ್, ನಾನು ದಲಿತನಾಗಿದ್ದು, ನನ್ನ ಏಳಿಗೆ ಸಹಿಸಲಾಗದೆ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ ಎಂದಿದ್ದಾರೆ.
'ನಾನು ವಾಲ್ಮೀಕಿ ಸಮುದಾಯಕ್ಕೆ ಸೇರಿದವನಾಗಿದ್ದು ಸಂಪುಟದಲ್ಲಿದ್ದ ಏಕೈಕ ದಲಿತನಾಗಿದ್ದೆ , ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು .ವಿಡಿಯೋದಲ್ಲಿ ಯಾವುದೇ ಧೃಡಿಕರಣವಿಲ್ಲ. ಇದನ್ನು ಮಾಧ್ಯಮಗಳಲ್ಲಿ ನೋಡಿ ತೀವ್ರವಾಗಿ ನೊಂದಿದ್ದೇನೆ .ಇದರ ಸತ್ಯಾಸತ್ಯತೆ ಹೊರ ಬರಬೇಕು' ಎಂದರು.
'ನಾನು ಬಡಕುಟುಂಬದಿಂದ ಬಂದವನಾಗಿದ್ದು , ದಲಿತರು ಇದೇ ರೀತಿ ನಿರಂತರವಾಗಿ ಶೋಷಣೆಗೊಳಗಾಗಿದ್ದಾರೆ. ನನ್ನೊಂದಿಗೆ ನನ್ನ ಕುಟುಂಬವಿದೆ.ನಾನು ಆರೋಪದಿಂದ ಮುಕ್ತನಾಗುತ್ತೇನೆ . ಕೇವಲ ಪಕ್ಷದ ನೈತಿಕತೆಯನ್ನು ಎತ್ತಿ ಹಿಡಿಯುವ ಸಲುವಾಗಿ ರಾಜೀನಾಮೆ ನೀಡಿದ್ದೇನೆ' ಎಂದರು.
36 ರ ಹರೆಯದ ಸಂದೀಪ್ ಕುಮಾರ್ ಅವರು ಇಬ್ಬರು ಮಹಿಳೆಯರೊಂದಿಗೆ ಆಕ್ಷೇಪಾರ್ಹ ಭಂಗಿಯಲ್ಲಿ ಇರುವ ಸೀಡಿ ಬುಧವಾರ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ತಲುಪಿದೆ. ಈ ಸೀಡಿ ವೀಕ್ಷಿಸಿದ ಅರ್ಧ ಗಂಟೆಯಲ್ಲಿ ಸಿಎಂ ಕೇಜ್ರಿವಾಲ್ ಅವರು ಸಂದೀಪ್ ಕುಮಾರ್‌ರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ್ದರು.