ಸಂಗ್ರಹ ಚಿತ್ರ 
ದೇಶ

ಇದೇನು ದಂಗೆಯೇ?: ಸೇನಾಧಿಕಾರಿಗಳ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ!

ನೋಟು ನಿಷೇಧ ಕುರಿತಂತೆ ಕೇಂದ್ರಸರ್ಕಾರದ ವಿರುದ್ಧ ಸಮರ ಸಾರಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತೆ ಸುದ್ದಿಯಲ್ಲಿದ್ದು, ತಮಗೆ ತಿಳಿಸದೇ ರಾಜ್ಯದಲ್ಲಿ ಸೇನೆ ನಿಯೋಜಿಸಿದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೋಲ್ಕತಾ: ನೋಟು ನಿಷೇಧ ಕುರಿತಂತೆ ಕೇಂದ್ರಸರ್ಕಾರದ ವಿರುದ್ಧ ಸಮರ ಸಾರಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತೆ ಸುದ್ದಿಯಲ್ಲಿದ್ದು, ತಮಗೆ ತಿಳಿಸದೇ ರಾಜ್ಯದಲ್ಲಿ ಸೇನೆ ನಿಯೋಜಿಸಿದ ಕೇಂದ್ರ ಸರ್ಕಾರದ  ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೂಲಗಳ ಪ್ರಕಾರ ಪಶ್ಚಿಮಬಂಗಾಳದಲ್ಲಿ ಕೋಮುಗಲಭೆ ನಡೆಯುವ ಶಂಕೆಯ ಹಿನ್ನಲೆಯಲ್ಲಿ ಕೇಂದ್ರ ಗೃಹ ಇಲಾಖೆ ಸೇನಾಧಿಕಾರಿಗಳನ್ನು ಟೋಲ್ ಬೂತ್ ಗಳಲ್ಲಿ ನಿಯೋಜಿಸಿದ್ದು, ರಾಜ್ಯ ಸರ್ಕಾರದ ವಿವೇಚನೆಗೆ ತರದೇ ಕೇಂದ್ರ  ಸರ್ಕಾರ ಕೈಗೊಂಡಿರುವ ಕ್ರಮದ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೋಟು ನಿಷೇಧ ಸಂಬಂಧ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿದ ತಮ್ಮನ್ನು ಕೇಂದ್ರ ಸರ್ಕಾರ ಹತ್ಯೆಗೈಯ್ಯಲು  ಯತ್ನಿಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಮಮತಾ ಬ್ಯಾನರ್ಜಿ ಅವರು, ಇದೇನು ದಂಗೆಯೇ? ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರದ ಗಮನಕ್ಕೆ ತರದೆಯೇ ಕೇಂದ್ರ ಸರ್ಕಾರದ ಸೇನೆಯನ್ನು ನಿಯೋಜಿಸಿದೆ. ಕೇಂದ್ರ  ಸರ್ಕಾರದ ನೋಟು ನಿಷೇಧ ಕ್ರಮದಿಂದಾಗಿ ದೇಶದ ಜನತೆ ಆರ್ಥಿಕ ಬಿಕ್ಕಟ್ಟಿನಿಂದಾಗಿ ತತ್ತರಿಸುತ್ತಿದ್ದಾರೆ. ಇದನ್ನು ವಿರೋಧಿಸಿದ್ದಕ್ಕೆ ಕೇಂದ್ರ ಸರ್ಕಾರ ನಮ್ಮ ಗಮನಕ್ಕೂ ಕೂಡ ತರದೇ ಕೋಮುಗಲಭೆ ನಿಯಂತ್ರಿಸುವ ಹೆಸರಲ್ಲಿ  ರಾಜ್ಯದಲ್ಲಿ ಸೇನೆಯನ್ನು ನಿಯೋಜಿಸಿದೆ. ಇದರ ಹಿಂದಿನ ಉದ್ದೇಶವಾದರೂ ಏನು ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

ಕೋಲ್ಕತಾದ ಮೂರು ಟೋಲ್ ಬೂತ್ ಗಳಲ್ಲಿ ಸೇನಾಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಉಳಿದಂತೆ ಜಲ್ಪೈಗುರಿ, ಅಲಿಪುರದೌರ್, ಡಾರ್ಜಿಲಿಂಗ್, ಬಾರಕ್ಪುರ, ಉತ್ತರ 24 ಪರಗಣ, ಹೌರಾ, ಹೂಗ್ಲಿ, ಕೋಲ್ಕತಾ, ಮುರ್ಷಿದಾಬಾದ್  ಮತ್ತು ಬುರ್ದ್ವಾನ್ ನಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ.  ಇದು ಸಿಎಂ ಮಮತಾ ಅವರ ಕೆಂಗಣ್ಣಿಗೆ ಗುರಿಯಾಗಿದ್ದು, ಇದೇ ಕಾರಣಕ್ಕೆ ಅವರು ರಾಜ್ಯ ಕಾರ್ಯದರ್ಶಿ ಕಚೇರಿಯನ್ನು ಬಿಟ್ಟು ತಾವು ತೆರಳುವುದಿಲ್ಲ ಎಂದು ಪಟ್ಟು  ಹಿಡಿದಿದ್ದಾರೆ. ರಾಜ್ಯದ ಶೇ.80ರಷ್ಟು ಭಾಗದಲ್ಲಿ ಸೇನೆಯನ್ನು ನಿಯೋಜಿಸಲಾಗಿದ್ದು, ಸೇನೆಯನ್ನು ಹಿಂಪಡೆಯುವವರೆಗೂ ತಾವು ಕಚೇರಿ ಬಿಟ್ಟು ತೆರಳುವುದಿಲ್ಲ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಶಕ್ತಿ, ಜ್ಞಾನ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಸಿಎಂ ಡಿಕೆ ಶಿವಕುಮಾರ್