ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಅಮೆರಿಕದಿಂದ ಪಾಕಿಸ್ತಾನಕ್ಕೆ 900 ಮಿಲಿಯನ್ ಡಾಲರ್ ನೆರವು: ಕಂಡೀಷನ್ಸ್ ಅಪ್ಲೈ

ಪಾಕಿಸ್ತಾನಕ್ಕೆ 900 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡುವ ಅಮೆರಿಕದ ರಕ್ಷಣಾ ಮಸೂದೆ ಯುಎಸ್ ನ ಜನಪ್ರತಿನಿಧಿ ಸದನ (ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್) ನಲ್ಲಿ ಅಂಗೀಕಾರಗೊಂಡಿದೆ.

ಅಮೆರಿಕದಿಂದ ಪಾಕಿಸ್ತಾನಕ್ಕೆ 900 ಮಿಲಿಯನ್ ಡಾಲರ್ ನೆರವು: ಕಂಡೀಷನ್ಸ್ ಅಪ್ಲೈ
Srinivas Rao BV
Updated On : 3 Dec 2016, 5:57 am
ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ 900 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡುವ ಅಮೆರಿಕದ ರಕ್ಷಣಾ ಮಸೂದೆ ಯುಎಸ್ ನ ಜನಪ್ರತಿನಿಧಿ ಸದನ (ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್) ನಲ್ಲಿ ಅಂಗೀಕಾರಗೊಂಡಿದೆ. 
ಮಸೂದೆಯನ್ನು ಅಂಗೀಕರಿಸಿರುವ ಅಮೆರಿಕ ಸಂಸತ್ ಪಾಕಿಸ್ತಾನಕ್ಕೆ ಕೆಲವು ಷರತ್ತುಗಳನ್ನು ವಿಧಿಸಿದೆ. ಅಪ್ಘಾನಿಸ್ತಾನದಲ್ಲಿರುವ ಪಾಕಿಸ್ತಾನ ಬೆಂಬಲಿತ ಉಗ್ರ ಸಂಘಟನೆ ಹಕ್ಕಾನಿ ನೆಟ್ ವರ್ಕ್ ವಿರುದ್ಧ ಪಾಕಿಸ್ತಾನ ಕಾರ್ಯಾಚರಣೆ ನಡೆಸುತ್ತಿದೆ ಎಂಬುದನ್ನು ಪೆಂಟಗನ್ ದೃಢಪಡಿಸಿದ ನಂತರವಷ್ಟೇ ಆರ್ಥಿಕ ನೆರವಿನ ಬಹುತೇಕ ಭಾಗ ಪಾಕಿಸ್ತಾನಕ್ಕೆ ತಲುಪಲಿದೆ. 
ನ.2 ರಂದು ರಾಷ್ಟ್ರೀಯ ರಕ್ಷಣಾ ದೃಢೀಕರಣ ಕಾಯ್ದೆ ಅಥವಾ ಎನ್ ಡಿಎಎ-17 ಮಸೂದೆಯನ್ನು ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್ ನಲ್ಲಿ ಅಂಗೀಕರಿಸಲಾಗಿದ್ದು, ಪಾಕಿಸ್ತಾನಕ್ಕೆ ನೀಡಲಾಗುವ ಆರ್ಥಿಕ ನೆರವೂ ಸೇರಿದಂತೆ ಒಟ್ಟು 1.1 ಬಿಲಿಯನ್ ಖರ್ಚನ್ನು ಅಂದಾಜಿಸಲಾಗಿದೆ. 

Advertisement

Advertisement

ಪಾಕಿಸ್ತಾನಕ್ಕೆ ಆರ್ಥಿಕ ನೆರವು ನೀಡುವುದಕ್ಕೂ ಮುನ್ನ ಹಕ್ಕಾನಿ ಉಗ್ರ ಜಾಲಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಕಾರ್ಯಾಚರಣೆಗಳ ಕುರಿತು ಕಾಂಗ್ರೆಸ್ ನ ಅಧಿಸೂಚನೆ ಮತ್ತು ಪ್ರಮಾಣೀಕರಣದ ಅವಶ್ಯಕತೆಗಳಿವೆ. ಕೆಲವು ವರದಿಗಳ ಪ್ರಕಾರ ಪಾಕಿಸ್ತಾನ ಹಕ್ಕಾನಿ ಉಗ್ರ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವವರೆಗೂ 450 ಮಿಲಿಯನ್ ಡಾಲರ್ ನೆರವನ್ನು ತಡೆಹಿಡಿಯಲಾಗುತ್ತದೆ ಎಂದು ತಿಳಿದುಬಂದಿದೆ. ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಕೈಗೊಂಡಿರುವ  ಕ್ರಮಗಳು ಸಮಾಧಾನಕರವಾಗಿಲ್ಲ ಎಂದು ಅಮೆರಿಕದ ರಕ್ಷಣಾ ಸಚಿವರು ಹೇಳಿದ್ದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಪಾಕ್ ಗೆ 300 ಮಿಲಿಯನ್ ಡಾಲರ್ ನೆರವನ್ನು ತಡೆಹಿಡಿಯಲಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement