5 ರೂಪಾಯಿ ಬರೆದುಕೊಟ್ಟ ಚೆಕ್ 
ದೇಶ

ಸಾರ್ವಜನಿಕ ಶೌಚಾಲಯ ಬಳಸಿ 5 ರೂಪಾಯಿಯನ್ನು ಚೆಕ್ ಮೂಲಕ ಬರೆದುಕೊಟ್ಟ ಅಸಾಮಿ!

ನೋಟುಗಳ ಅಪಮೌಲ್ಯದ ನಂತರ ಜನರು ಚಿಲ್ಲರೆಗಾಗಿ ಪರದಾಡುವ ಪರಿಸ್ಥಿತಿ ಎಲ್ಲೆಡೆ ಕಂಡುಬರುತ್ತಿದೆ...

ಮಧುರೈ: ನೋಟುಗಳ ಅಪಮೌಲ್ಯದ ನಂತರ ಜನರು ಚಿಲ್ಲರೆಗಾಗಿ ಪರದಾಡುವ ಪರಿಸ್ಥಿತಿ ಎಲ್ಲೆಡೆ ಕಂಡುಬರುತ್ತಿದೆ. ಇನ್ನೊಂದೆಡೆ ನಗದುರಹಿತ ವಹಿವಾಟಿಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿರುವ ಸಂದರ್ಭದಲ್ಲಿ ಮಧುರೈ ಮೂಲದ ವ್ಯಕ್ತಿಯೊಬ್ಬರು ಸಾರ್ವಜನಿಕ ಶೌಚಾಲಯವನ್ನು ಬಳಸಿದ್ದಕ್ಕೆ 5 ರೂಪಾಯಿಯನ್ನು ಚೆಕ್ ಮೂಲಕ ಬರೆದುಕೊಟ್ಟ ಹಾಸ್ಯಾಸ್ಪದ ಪ್ರಸಂಗ ನಡೆದಿದೆ.
ಪಬ್ಲಿಕ್ ಟಾಯ್ಲೆಟ್ ಮಧುರೈ, 5 ರೂಪೀಸ್ ಒನ್ಲಿ ಎಂದು ಬರೆದ ಚೆಕ್ ನ್ನು ಫೇಸ್ ಬುಕ್ ನಲ್ಲಿ ಒಬ್ಬರು ಶೇರ್ ಮಾಡಿದ್ದಾರೆ.
ಈ ಚೆಕ್ ನ ನಿಖರತೆ ಬಗ್ಗೆ ತಿಳಿದುಬಂದಿಲ್ಲ. ಆದರೆ ಇದು ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಅನೇಕರ ಗಮನ ಸೆಳೆದಿದೆ. ಹಲವರು ಶೇರ್ ಮಾಡಿ ಕಮೆಂಟ್ ಮಾಡಿದ್ದಾರೆ.ಚೆಕ್ ಕ್ಲಿಯರ್ ಆದ ಮೇಲೆ ನಿಮಗೆ ಸೇವೆ ನೀಡಲಾಗುವುದು ಎಂದು ಒಬ್ಬರು ಬರೆದರೆ, ಮತ್ತೊಬ್ಬರು ಮೋದಿಗೆ ಪೆಟಿಎಂನಲ್ಲಿ ಹಣ ಪಾವತಿಸಿ ಎಂದು ಕಮೆಂಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ. ಬೆಲೆಬಾಳುವ 17 ಅಂತಸ್ತಿನ ಕಟ್ಟಡ 'Abode ಇಡಿ ವಶಕ್ಕೆ!

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

SCROLL FOR NEXT