ಜಯಲಲಿತಾ 
ದೇಶ

ಮತ್ತೆ ಸಾಬೀತು: ತಮಿಳರ ಪಾಲಿಗೆ ಡಿಸೆಂಬರ್ ಅಪಶಕುನದ ತಿಂಗಳು

ಜಯಲಲಿತಾ ಸಾವಿನೊಂದಿಗೆ ತಮಿಳರ ಪಾಲಿಗೆ ಡಿಸೆಂಬರ್ ಅಪಶಕುನದ ತಿಂಗಳು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.ಡಿಸೆಂಬರ್ ತಿಂಗಳಿನಲ್ಲೇ ತಮಿಳುನಾಡಿನಲ್ಲಿ ...

ಚೆನ್ನೈ: ಜಯಲಲಿತಾ ಸಾವಿನೊಂದಿಗೆ ತಮಿಳರ ಪಾಲಿಗೆ ಡಿಸೆಂಬರ್ ಅಪಶಕುನದ ತಿಂಗಳು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.ಡಿಸೆಂಬರ್ ತಿಂಗಳಿನಲ್ಲೇ ತಮಿಳುನಾಡಿನಲ್ಲಿ ಏನಾದರೊಂದು ಅನಾಹುತ ಸಂಭವಿಸುತ್ತಿರುವುದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತಿದೆ. ಹಲವು ಪ್ರಮುಖ ನಾಯಕರು ಡಿಸೆಂಬರ್ ತಿಂಗಳಲ್ಲೇ ಕೊನೆಯುಸಿರೆಳೆದಿದ್ದಾರೆ.

ಮದ್ರಾಸ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಗೃಹ ಸಚಿವರಾಗಿದ್ದ ಸಿ. ರಾಜಗೋಪಾಲಚಾರಿ ಮೃತಪಟ್ಟಿದ್ದು 1972, ಡಿಸೆಂಬರ್ 25ರಂದು.

ಅದೇ ರೀತಿ, ದ್ರಾವಿಡ ಚಳವಳಿಯ ನಾಯಕ ಪೆರಿಯಾರ್ ರಾಮಸ್ವಾಮಿ, 1972, ಡಿಸೆಂಬರ್ 24ರಂದು ಕೊನೆಯುಸಿರೆಳೆದರು. ಜಯಲಲಿತಾ ರಾಜಕೀಯ ಗುರು ಎಂಜಿಆರ್ ರಾಮಚಂದ್ರನ್​ ಮೃತಪಟ್ಟಿದ್ದೂ ಸಹ 1987ರ ಡಿಸೆಂಬರ್ 24ರಂದು.

ಇದಲ್ಲದೇ, 2004ರಲ್ಲಿ ಚೆನ್ನೈನಲ್ಲಿ ನೂರಾರು ಮಂದಿಯ ಸಾವು-ನೋವಿಗೆ ಕಾರಣವಾದ ಮೃತ್ಯು ಸ್ವರೂಪಿ ಸುನಾಮಿ ಅಪ್ಪಳಿಸಿದ್ದೂ ಡಿಸೆಂಬರ್ 26ರಂದು.

ಇನ್ನು  ಭಾರಿ ಮಳೆಯಿಂದಾಗಿ ಚಿನ್ನೈ ಪ್ರವಾಹ ಪರಿಸ್ಥಿತಿ ಎದುರಿಸಿದ್ದೂ ಕಳೆದ ವರ್ಷ ಡಿಸೆಂಬರ್ 14ರಂದು.ಇದೀಗ, ತಮಿಳರ ಆರಾಧ್ಯ ದೈವ ಜಯಲಲಿತಾ ನಿಧನ, ತಮಿಳರ ಪಾಲಿಗೆ ಡಿಸೆಂಬರ್​ ಶೋಕಸಾಗರದಲ್ಲಿ ಮುಳುಗಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಮಮತಾಗೆ ಬಿಗ್ ಶಾಕ್; TMC ವಿಭಜನೆ? ತೃಣಮೂಲ ಕಾಂಗ್ರೆಸ್ ನ 50 ಶಾಸಕರು, 20 ಸಂಸದರು ಬಿಜೆಪಿ ಸೇರ್ಪಡೆ?

ಗ್ಯಾಂಗ್ ರೇಪ್ ಪ್ರಕರಣ: ವಿವಾದಿತ ದೇವಮಾನವ Asaram Bapu ಖುಲಾಸೆ

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ: 15 ಕಿ.ಮೀ. ಒಳಗಿನ ಅಕ್ರಮ ನಿರ್ಮಾಣ ಕೆಡವಲು ಅಮಿತ್ ಶಾ ಸೂಚನೆ

SCROLL FOR NEXT