ಸಂಗ್ರಹ ಚಿತ್ರ 
ದೇಶ

ಕಣಿವೆ ರಾಜ್ಯದಲ್ಲಿ ಮತ್ತೆ ಉಗ್ರರ ಹಾವಳಿ; ಅರ್ವಾನಿ ಸೆಕ್ಟರ್ ಮೇಲೆ ಗುಂಡಿನ ದಾಳಿ!

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ಹಾವಳಿ ಮುಂದುವರೆದಿದ್ದು, ಅನಂತನಾಗ್ ಜಿಲ್ಲೆಯ ಅರ್ವಾನಿ ಸೆಕ್ಚರ್ ಮೇಲೆ ದಾಳಿ ಮಾಡಿರುವ ಶಸ್ತ್ರಸಜ್ಜಿತ ಉಗ್ರರು ಸೇನೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ.

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ಹಾವಳಿ ಮುಂದುವರೆದಿದ್ದು, ಅನಂತನಾಗ್ ಜಿಲ್ಲೆಯ ಅರ್ವಾನಿ ಸೆಕ್ಚರ್ ಮೇಲೆ ದಾಳಿ ಮಾಡಿರುವ ಶಸ್ತ್ರಸಜ್ಜಿತ ಉಗ್ರರು ಸೇನೆಯನ್ನು ಗುರಿಯಾಗಿಸಿಕೊಂಡು ದಾಳಿ  ನಡೆಸುತ್ತಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಇದೀಗ ತೀವ್ರ ಚಳಿ ಇದ್ದು, ರಸ್ತೆ ಕಾಣದಷ್ಟು ದಟ್ಟ ಮಂಜು ಆವರಿಸುತ್ತಿದೆ. ಇದನ್ನೇ ತಮ್ಮ ಕುಕೃತ್ಯಕ್ಕೆ ಬಳಕೆ ಮಾಡುತ್ತಿರುವ ಪಾಕಿಸ್ತಾನ ಮೂಲದ ಉಗ್ರರು ಗಡಿ ಬೇಲಿ ದಾಟಿ ಭಾರತದೊಳಗೆ ನುಸುಳಿ  ಭಾರತೀಯ ಸೇನೆಯ ಮೇಲೆ ದಾಳಿ ನಡೆಸುತ್ತಿದ್ದಾರೆ. ಅನಂತ್ ನಾಗ್ ಜಿಲ್ಲೆಯ ಅರ್ವಾನಿ ಸೆಕ್ಚರ್ ಮೇಲೆ ದಾಳಿ ನಡೆಸುತ್ತಿರುವ ಶಸ್ತ್ರಸಜ್ಜಿತ ಉಗ್ರರು ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಸತತ ಗುಂಡಿನ ದಾಳಿ  ನಡೆಸುತ್ತಿದ್ದಾರೆ.

ಅರ್ವಾನಿ ಸೆಕ್ಟರ್ ನಲ್ಲಿನ ಮನೆಗಳಲ್ಲಿ ಅಡಗಿ ಕುಳಿತು ಉಗ್ರರು ದಾಳಿ ನಡೆಸುತ್ತಿದ್ದು, ಉಗ್ರರ ವಿರುದ್ಧ ಯೋಧರು ಗುಂಡಿನ ಮೂಲಕವೇ ಉತ್ತರ ನೀಡುತ್ತಿದ್ದಾರೆ. ಅಂತೆಯೇ ಘಟನಾ ಸ್ಥಳದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು,  ಅವಿತಿರುವ ಉಗ್ರರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ