ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ನೈಸರ್ಗಿಕ ಅನಿಲ ಯೋಜನೆಗೆ ಸಂಬಂಧಿಸಿದಂತೆ ವಿಶ್ವಬ್ಯಾಂಕ್ ನಿಂದ ಸಿಗಬೇಕಿದ್ದ 100 ಮಿಲಿಯನ್ ಡಾಲರ್ ಸಾಲಕ್ಕೆ ಕೊಕ್ಕೆ ಬಿದ್ದಿದೆ. ಪಾಕಿಸ್ತಾನಕ್ಕೆ ನೀಡಬೇಕಿದ್ದ 100 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ವಿಶ್ವಬ್ಯಾಂಕ್ ಹಿಂಪಡೆದಿದೆ.
ಆರ್ಥಿಕ ನೆರವನ್ನು ವಾಪಸ್ ಪಡೆಯಲು ಪಾಕಿಸ್ತಾನದ ಗ್ಯಾಸ್ ವಿತರಣಾ ಸಂಸ್ಥೆಯ ಆಸಕ್ತಿ ಕೊರತೆಯನ್ನು ವಿಶ್ವಬ್ಯಾಂಕ್ ಕಾರಣವಾಗಿ ನೀಡಿದೆ. ಪಾಕಿಸ್ತಾನದ ನೈಸರ್ಗಿಕ ಅನಿಲ ಯೋಜನೆಯ ಭಾಗವಾಗಿ ಸೂಯಿ ಸದರನ್ ಗ್ಯಾಸ್ ಕಂಪನಿ(ಎಸ್ಎಸ್ ಜಿ ಸಿ) ಕರಾಚಿ, ಬಲೂಚಿಸ್ತಾನ, ಸಿಂಧ್ ಪ್ರದೇಶದಲ್ಲಿ ನೈಸರ್ಗಿಕ ಅನಿಲವನ್ನು ಪೂರೈಕೆ ಮಾಡಬೇಕಿತ್ತು. ಆದರೆ ಸೂಯಿ ಸದರನ್ ಗ್ಯಾಸ್ ಕಂಪನಿಯ ಆಸಕ್ತಿಯ ಕೊರತೆಯಿಂದಾಗಿ ಯೋಜನೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ 100 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ರದ್ದುಗೊಳಿಸಲಾಗಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.