ದೇಶ

ಅಸ್ಸಾಂ: 20 ಲಕ್ಷ ರೂ ಮೊತ್ತದ ಹೊಸ ನೋಟುಗಳನ್ನು ಹೊಂದಿದ್ದ ಮೂವರ ಬಂಧನ

Srinivas Rao BV
ಗುವಾಹಟಿ: ಕಮಿಷನ್ ಗಾಗಿ ಹಳೆಯ ನೋಟುಗಳನ್ನು ಅಕ್ರಮವಾಗಿ 2,000 ರೂ ನೋಟುಗಳಿಗೆ ಬದಲಾವಣೆ ಮಾಡಿದ ಆರೋಪದಡಿ ಅಸ್ಸಾಂ ನಲ್ಲಿ 3 ಜನರನ್ನು ಬಂಧಿಸಲಾಗಿದೆ. 
ಹಟಿಗಾಂವ್ ಪ್ರದೇಶದ ಮನೆಯಲ್ಲಿದ್ದ ಮೂವರನ್ನು ಬಂಧಿಸಲಾಗಿದ್ದು, 20 ಲಕ್ಷ ರೂ ಮೊತ್ತದ 2000 ರೂ ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಸ್ಸಾಂ ಪೊಲೀಸರು ತಿಳಿಸಿದ್ದಾರೆ. ಮೂರು ಜನರ ತಂಡ ನಡೆಸಿರುವ ಅಕ್ರಮದ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಹಂಟಿಗಾಂವ್ ಪ್ರದೇಶದ ಮನೆಯೊಂದರ ಮೇಲೆ ದಾಳಿ ನಡೆಸಲಾಯಿತು. ಬಂಧಿತ ವ್ಯಕ್ತಿಗಳು ಮತ್ತೊಂದು ತಂಡಕ್ಕೆ ಸುಮಾರು 26 ಲಕ್ಷ ರೂಪಾಯಿ ಮೊತ್ತದ ಹಳೆಯ ನೋಟುಗಳನ್ನು ಕಮಿಷನ್ ಪಡೆದು ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಡಲು ಉದ್ದೇಶಿಸಿದ್ದರು. ಈ ಪೈಕಿ ಈಗಾಗಲೇ 2೦ ಲಕ್ಷ ರೂಪಾಯಿಯಷ್ಟು ಮೊತ್ತದ ಹಣವನ್ನು ಬದಲಾವಣೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಬ್ಯಾಂಕ್ ನ ಅಧಿಕಾರಿಗಳೂ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. 
SCROLL FOR NEXT