ದೇಶ

ಸಚಿವೆ ಸುಷ್ಮಾ ಸ್ವರಾಜ್ ಗೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ

Srinivas Rao BV
ನವದೆಹಲಿ: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ವಿದೇಶಾಂಗ ಸಚಿವೆ ಸುಷ್ಮಾ ಅವರಿಗೆ ಡಿ.10 (ಶನಿವಾರ) ರಂದು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ಏಮ್ಸ್ ಆಸ್ಪತ್ರೆಯ ಮೂಲಗಳಿಂದ ತಿಳಿದುಬಂದಿದೆ. 
ಏಮ್ಸ್ ನ ನಿರ್ದೇಶಕರಾದ ಎಂಸಿ ಮಿಶ್ರಾ ಹಾಗೂ ತಜ್ಞರಾದ ವಿ.ಕೆ. ಬನ್ಸಾಲ್ ಹಾಗೂ ಸಂದೀಪ್ ಅಗರ್ ವಾಲ್ ನೇತೃತ್ವದ ತಂಡ ಶಸ್ತ್ರಚಿಕಿತ್ಸೆ ನಡೆಸಲಿದೆ ಎಂದು ಐಎಎನ್ ಎಸ್ ವರದಿ ಪ್ರಕಟಿಸಿದೆ.  ಜೀವಂತವಿರುವ ದಾನಿಯಿಂದ ಕಿಡ್ನಿಯನ್ನು ಪಡೆಯಲಾಗುತ್ತಿದೆ. 
ಕಿಡ್ನಿ ದಾನ ಮಾಡುತ್ತಿರುವವರು ಹಾಗೂ ಸುಷ್ಮಾ ಸ್ವರಾಜ್ ಅವರ ಕಿಡ್ನಿ ಹೊಂದಾಣಿಕೆ ತಪಾಸಣೆ ಸಂಪೂರ್ಣಗೊಂಡಿದ್ದು ಏಮ್ಸ್ ನ ತಜ್ಞರು ಶಸ್ತ್ರ ಚಿಕಿತ್ಸೆ ನಡೆಸಲಿದ್ದಾರೆ. ನ.16 ರಿಂದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಷ್ಮಾ ಸ್ವರಾಜ್ ಅವರು ದೀರ್ಘಾವಧಿ ಮಧುಮೇಹದಿಂದ ಬಳಲುತ್ತಿದ್ದು, ಕಿಡ್ನಿ ವೈಫಲ್ಯದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗೂ ಮುನ್ನ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ನಡೆಸಲಾಗುತ್ತಿತ್ತು. 
SCROLL FOR NEXT