ಉತ್ತರ ಪ್ರದೇಶ: ಮಗನ ಬಂಧನದ ನಂತರ ಆಘಾತದಿಂದ ಆರ್ ಎಸ್ಎಸ್ ನಾಯಕ ಸಾವು
ಖತೋಲಿ ನಗರದಲ್ಲಿ ಆರ್ ಎಸ್ಎಸ್ ನಾಯಕರೊಬ್ಬರು ತಮ್ಮ ಪುತ್ರ ಕಳತನ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾದ ಸುದ್ದಿ ಕೇಳಿ...
ಮುಜಾಫರ್ ನಗರ: ಖತೋಲಿ ನಗರದಲ್ಲಿ ಆರ್ ಎಸ್ಎಸ್ ನಾಯಕರೊಬ್ಬರು ತಮ್ಮ ಪುತ್ರ ಕಳತನ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾದ ಸುದ್ದಿ ಕೇಳಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.
ಸಬ್ ಇನ್ಸ್ ಪೆಕ್ಟರ್ ಅಜಯ್ ಕುಮಾರ್ ನೇತೃತ್ವದ ತಂಡ ನಿನ್ನೆ ಕಳ್ಳತನ ಆರೋಪದ ಮೇಲೆ ಅಭೆಯ್ ಕಂದ್ ಶರ್ಮಾ ಎಂಬುವವರನ್ನು ಬಂಧಿಸಿತ್ತು. ಬಂಧನ ಸುದ್ದಿ ಕೇಳಿದ ಅವರ ತಂದೆ ಚೇತನ್ ಪ್ರಕಾಶ್ ಅವರು ಆಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಠಾಣಾ ಅಧಿಕಾರಿ ಕೆ.ಪಿ.ಸಿಂಗ್ ಅವರು ಹೇಳಿದ್ದಾರೆ.
ಈ ಮಧ್ಯೆ, ಆರೋಪಿ ತಂದೆ ಚೇತನ್ ಪ್ರಕಾಶ್ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಸನ್ ಇನ್ಸ್ ಪೆಕ್ಟರ್ ಅಜಯ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ.
ಇನ್ನು ಘಟನೆಯನ್ನು ಖಂಡಿಸಿ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಧರಣಿ ನಡೆಸಿದ ಘಟನೆಯೂ ನಡೆದಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.