ಕಪ್ಪು-ಬಿಳಿ ದಂಧೆ: ಆರ್ಬಿಐ ಅಧಿಕಾರಿ ಮೈಕಲ್ ಅಮಾನತು
ಕಾಳಧನಿಕರಿಗೆ ಸಹಾಯ ಮಾಡುತ್ತಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ಸಹಾಯಕ ಅಧಿಕಾರಿ ಮೈಕಲ್ ರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ ಎಂದು...
ಬೆಂಗಳೂರು: ಕಾಳಧನಿಕರಿಗೆ ಸಹಾಯ ಮಾಡುತ್ತಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ಸಹಾಯಕ ಅಧಿಕಾರಿ ಮೈಕಲ್ ರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಡೆಪ್ಯುಟಿ ಗವರ್ನರ್ ಆರ್ ಗಾಂಧೀ ಅವರು ಹೇಳಿದ್ದಾರೆ.
ಕಪ್ಪುಹಣವನ್ನು ಬಿಳಿಯಾಗಿಸುವ ದಂಧೆಯಲ್ಲಿ ತೊಡಿಗಿದ್ದ ಆರೋಪದ ಮೇಲೆ ಮೈಕಲ್ ನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದು ಆತನನ್ನು ಕೆಲಸದಿಂದ ವಜಾ ಮಾಡಲಾಗಿದ್ದು ಆತನ ವಿರುದ್ಧ ತನಿಖೆ ಆರಂಭಿಸಲಾಗಿದೆ. ಪ್ರಕರಣ ಸಂಬಂಧ ವಿವರಗಳು ಲಭ್ಯವಾದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗಾಂಧೀ ಅವರು ಹೇಳಿದ್ದಾರೆ.
ಸುಮಾರು 1.51 ಕೋಟಿ ರು. ಕಪ್ಪುಹಣವನ್ನು ಬಿಳಿಯಾಗಿಸಿದ ಆರೋಪದ ಮೇಲೆ ಮೈಕಲ್ ನನ್ನು ಬಂಧಿಸಲಾಗಿದ್ದು, ಬಂಧಿತರಿಂದ ಒಟ್ಟು 17 ಲಕ್ಷ ರು.ಹಣವನ್ನು ಜಪ್ತಿ ಮಾಡಲಾಗಿದೆ. ಮೈಕಲ್ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನ ಎಸ್ ಬಿಎಂ ಬ್ಯಾಂಕಿಗೆ ಸೇರಿದ ಸುಮಾರು 1.51 ಕೋಟಿ ರು.ಹಣವನ್ನು ಹಳೆಯ ನೋಟುಗಳನ್ನು ಪಡೆದು ಬದಲಾಯಿಸಿಕೊಟ್ಟಿದ್ದರು ಎಂಬ ಆರೋಪವಿದೆ.