ನ.8 ರಿಂದ ಡಿ.30ರ ವರೆಗಿನ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿಡಿ: ಬ್ಯಾಂಕ್‍ಗಳಿಗೆ ಆರ್‌ಬಿಐ ಸೂಚನೆ
ದೇಶಾದ್ಯಂತ ನೋಟು ನಿಷೇಧ ಬಳಿಕ ನಡೆದ ಬ್ಯಾಂಕ್ ವ್ಯವಹಾರಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿಡುವಂತೆ ರಾಷ್ಟ್ರೀಯ ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕ್ ಗಳಿಗೆ ಸೂಚಿಸಿದೆ...
ಮುಂಬೈ: ದೇಶಾದ್ಯಂತ ನೋಟು ನಿಷೇಧ ಬಳಿಕ ನಡೆದ ಬ್ಯಾಂಕ್ ವ್ಯವಹಾರಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿಡುವಂತೆ ರಾಷ್ಟ್ರೀಯ ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕ್ ಗಳಿಗೆ ಸೂಚಿಸಿದೆ.
ನೋಟು ನಿಷೇಧಗೊಂಡ ನಂತರ ಕಾಳಧನಿಕರಿಗೆ ಬ್ಯಾಂಕಿನವರರೇ ಸಹಕರಿಸುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ನವೆಂಬರ್ 8 ರಿಂದ ಡಿಸೆಂಬರ್ 30ರವರೆಗಿನ ಬ್ಯಾಂಕ್ ವ್ಯವಹಾರಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿಡಿ ಆರ್‌ಬಿಐ ಯಾವಾಗ ಬೇಕಾದರೂ ಮಾಹಿತಿಯನ್ನು ಕೇಳಬಹುದು ಎಂದು ಬ್ಯಾಂಕ್ ಗಳಿಗೆ ಹೇಳಿದೆ.
ಅಕ್ಟೋಬರ್ 27 ಅಪೆಕ್ಸ್ ಬ್ಯಾಂಕ್ ಎಲ್ಲಾ ಬ್ಯಾಂಕ್ ಗಳ ಬ್ಯಾಂಕಿಂಗ್ ಹಾಲ್, ಕೌಂಟರ್ ಮತ್ತು ಎಲ್ಲಾ ಜಾಗಗಳಲ್ಲಿಯೂ ಸಿಸಿಟಿವಿಯನ್ನು ಅಳವಡಿಸುವಂತೆ ಸೂಚಿಸಿತ್ತು. ನಕಲಿ ದಾಖಲೆ ನೀಡುವ ವ್ಯಕ್ತಿಗಳನ್ನು ಗುರುತಿಸಲುವ ಸಲುವಾಗಿ ಈ ನಿರ್ಣಯವನ್ನು ಅಪೆಕ್ಸ್ ಬ್ಯಾಂಕ್ ತಿಳಿಸಿತ್ತು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.