ದೇಶ

ಅತ್ಯಾಚಾರದಿಂದ ಮಗು ಹುಟ್ಟಿದರೆ ಅಪರಾಧಿ ಪರಿಹಾರ ನೀಡಬೇಕು: ದೆಹಲಿ ಹೈಕೋರ್ಟ್ ಆದೇಶ

Sumana Upadhyaya
ನವದೆಹಲಿ: ಲೈಂಗಿಕ ಅಪರಾಧಕ್ಕೆ ಬಲಿಯಾದವರ ಗುರುತನ್ನು ರಕ್ಷಿಸಲು ನ್ಯಾಯಾಂಗ ದಾಖಲೆಯಲ್ಲಿ ಎಲ್ಲಿಯೂ ಅವರ ಗುರುತನ್ನು ಬಹಿರಂಗಪಡಿಸಬಾರದು ಎಂದು ವಿಚಾರಣಾ ನ್ಯಾಯಾಲಯಗಳಿಗೆ ದೆಹಲಿ ಹೈಕೋರ್ಟ್ ಆದೇಶ ನೀಡಿದೆ. ವಿಚಾರಣೆ ಸಂದರ್ಭದಲ್ಲಿ ಮತ್ತು ತೀರ್ಪು ನೀಡುವ ವೇಳೆ ಕಲ್ಪಿತ ಹೆಸರನ್ನು ಬಳಸುವಂತೆ ದೆಹಲಿ ನ್ಯಾಯಾಲಯ ಸೂಚನೆ ನೀಡಿದೆ.
ನ್ಯಾಯಮೂರ್ತಿಗಳಾದ ಆರ್.ಕೆ.ಗೌಬಾ ಮತ್ತು ಗೀತಾ ಮಿತ್ತಲ್ ಅವರನ್ನೊಳಗೊಂಡ ವಿಭಾಗೀಯ ಪೀಠ ಗಾಯಾ ಪ್ರಸಾದ್ ಪಾಲ್ ಎಂಬುವರು ಸಲ್ಲಿಸಿದ್ದ ಮನವಿ ಅರ್ಜಿಯ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಈ ತೀರ್ಪು ನೀಡಿದೆ. ಈತ ತಮ್ಮ 14 ವರ್ಷದ ಮಲ ಮಗಳಿಗೆ ಲೈಂಗಿಕ ಕಿರುಕುಳ ನೀಡಿ ಆಕೆ ಗರ್ಭವತಿಯಾಗಲು ಕಾರಣರಾಗಿದ್ದಲ್ಲದೆ ಪದೇ ಪದೇ ಆಕೆಗೆ ಬೆದರಿಕೆಯೊಡ್ಡುತ್ತಿದ್ದರು ಎನ್ನಲಾಗಿದೆ. ಗಾಯಾ ಪ್ರಸಾದ್ ಪಾಲ್ ಗೆ ವಿಚಾರಣಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ನ್ಯಾಯಾಲಯ ತನ್ನ ತೀರ್ಪಿನಲ್ಲಿ, ಅತ್ಯಾಚಾರದಿಂದ ಹುಟ್ಟಿದ ಮಗು ಪರಿಹಾರಕ್ಕೆ ಅರ್ಹವಾಗಿರುತ್ತದೆ. ಪರಿಹಾರವನ್ನು ಮಗುವಿನ ತಾಯಿಗೆ ನೀಡಬೇಕು. ಆ ಮಗುವಿನ ತಾಯಿ ಮೈನರ್ ಆಗಿರಲಿ, ಇಲ್ಲವೇ ವಯಸ್ಕಳಾಗಿರಲಿ ಆಕೆಗೆ ಮಗು ಹುಟ್ಟಿದರೆ ಅಪರಾಧಿ ಪರಿಹಾರ ನೀಡಬೇಕೆಂದು ಕೋರ್ಟ್ ಆದೇಶ ನೀಡಿದೆ.
SCROLL FOR NEXT