ದೇಶ

ನೋಟು ನಿಷೇಧ: ವಿಮಾನ ನಿಲ್ದಾಣಗಳಲ್ಲಿ 70 ಕೋಟಿ ಹಣ, 170 ಕೆಜಿ ಚಿನ್ನ ವಶ

Shilpa D

ಮುಂಬಯಿ: ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ 500 ಹಾಗೂ 1000 ರು ಮುಖ ಬೆಲೆಯ ನೋಟುಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ ನಂತರ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಸುಮಾರಿ 70 ಕೋಟಿ ರು ಹಣ ಹಾಗೂ 170 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಸಿಐಎಸ್ ಎಫ್ ಡೈರೆಕ್ಟರ್ ಜನರಲ್ ಒ.ಪಿ ಸಿಂಗ್ ಹೇಳಿದ್ದಾರೆ.

ದೇಶದ ವಿವಿಧ ನಿಲ್ದಾಣಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಈ ಬೃಹತ್ ಮೊತ್ತದ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಅದರಲ್ಲಿ ಹಳೇಯ ಹಾಗೂ ಹೊಸ ನೋಟುಗಳು ಸೇರಿಕೊಂಡಿವೆ ಎಂದು ಅವರು ವಿವರಿಸಿದ್ದಾರೆ.  ದೇಶದ ಹಾಗೂ ಸರ್ಕಾರದ ಹಿತಾಸಕ್ತಿ ಹಾಗೂ ಕನಸನ್ನು ಸಾಕಾರಗೊಳಿಸಲು ನೆರವು ನೀಡಲು ಸಿಐಎಸ್ ಎಫ್ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ನಾವು ಯಾವುದೇ ವ್ಯಕ್ತಿ ಅಪಾರ ಪ್ರಮಾಣದ ಹಣ ಕೊಂಡೊಯ್ಯುವುದನ್ನು ನೋಡಿಲ್ಲ, ಯಥಾ ಪ್ರಕಾರ ನಾವು ಚೆಕಿಂಗ್ ಮಾಡುವ ವೇಳೆ, ಅಕ್ರಮ ಹಣ ಹಾಗೂ ಚಿನ್ನ ಸಾಗಾಟ ಮಾಡುತ್ತಿರುವುದು ನಮ್ಮ ಗಮನಕ್ಕೆ ಬರುತ್ತಿತ್ತು. ಆ ನಂತರ ನಾವು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದೆವು. ಆದರೆ ಈವರೆಗೂ ನಾವು ಯಾರೋಬ್ಬರನ್ನು ಬಂಧಿಸಿಲ್ಲ ಎಂದು ಹೇಳಿದ್ದಾರೆ.

SCROLL FOR NEXT