ವಕೀಲನಿಂದ ಪತ್ನಿ, ಪುತ್ರಿಗೆ ಚಿತ್ರಹಿಂಸೆ: ವಿಡಿಯೋ ಮಾಡಿ ಪೊಲೀಸರಿಗೆ ಕೊಟ್ಟ ಮತ್ತೊರ್ವ ಪುತ್ರಿ
ದೆಹಲಿಯ ವಕೀಲರೊಬ್ಬರು ಪತ್ನಿ ಹಾಗೂ ಮಗಳನ್ನು ನಿಂದಿಸಿ ಹಲ್ಲೆಗೈಯ್ಯುತ್ತಿರುವ ವಿಡಿಯೋವೊಂದನ್ನು ವಕೀಲರ ಇನ್ನೊರ್ವ ಪುತ್ರಿ ಚಿತ್ರೀಕರಿಸಿ ಪೊಲೀಸರಿಗೆ ನೀಡಿದ್ದಾರೆ...
ನವದೆಹಲಿ: ದೆಹಲಿಯ ವಕೀಲರೊಬ್ಬರು ಪತ್ನಿ ಹಾಗೂ ಮಗಳನ್ನು ನಿಂದಿಸಿ ಹಲ್ಲೆಗೈಯ್ಯುತ್ತಿರುವ ವಿಡಿಯೋವೊಂದನ್ನು ವಕೀಲರ ಇನ್ನೊರ್ವ ಪುತ್ರಿ ಚಿತ್ರೀಕರಿಸಿ ಪೊಲೀಸರಿಗೆ ನೀಡಿದ್ದಾರೆ.
ಈ ವಿಡಿಯೋದಲ್ಲಿ ವಕೀಲ ತನ್ನ ಪುತ್ರಿಗೆ ಥಳಿಸುವುದು ಕಾಣಿಸುತ್ತದೆ. ಆಕೆ ನೆಲಕ್ಕುರುಳುತ್ತಿದ್ದಂತೆಯೇ ವಕೀಲ ಅವಳನ್ನು ದರದರನೆ ಎಳೆದು ಹೊಡೆಯುವ ದೃಶ್ಯ ಸೆರೆಯಾಗಿದೆ.
15 ವರ್ಷಗಳ ಹಿಂದೆ ನಮ್ಮ ಮದುವೆಯಾಗಿದ್ದು ಅಂದಿನಿಂದ ಪತಿ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ. ಗಂಡು ಮಗುವಾಗಿಲ್ಲ ಎಂಬ ಕಾರಣಕ್ಕೆ ಪತಿ ಈ ರೀತಿ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.