ಅರ್ನಬ್ ಗೋಸ್ವಾಮಿ 
ದೇಶ

ಅರ್ನಬ್ ಗೋಸ್ವಾಮಿ ಹೊಸ ಚಾನಲ್ ನ ಹೆಸರು 'ರಿಪಬ್ಲಿಕ್'

ನವೆಂಬರ್ ನಲ್ಲಿ ಟೈಮ್ಸ್ ನೌ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕ ಹುದ್ದೆಗೆ ರಾಜೀನಾಮೆ ನೀಡಿದ್ದ ಟಿವಿ ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರ ಹೊಸ ಚಾನಲ್ ಹೆಸರು ಬಹಿರಂಗವಾಗಿದೆ.

ನವದೆಹಲಿ: ನವೆಂಬರ್ ನಲ್ಲಿ ಟೈಮ್ಸ್ ನೌ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕ ಹುದ್ದೆಗೆ ರಾಜೀನಾಮೆ ನೀಡಿದ್ದ ಟಿವಿ ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರ ಹೊಸ ಚಾನಲ್ ಹೆಸರು ಬಹಿರಂಗವಾಗಿದೆ.
'ರಿಪಬ್ಲಿಕ್' ಅರ್ನಬ್ ಗೋಸ್ವಾಮಿ ಪ್ರಾರಂಭಿಸುತ್ತಿರುವ ಹೊಸ ಚಾನಲ್ ನ ಹೆಸರಾಗಿದ್ದು, 2017 ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ (2017 ರ ಮೊದಲಾರ್ಧದಲ್ಲಿ) ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.    
ಚರ್ಚಾ ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಪಡೆದಿದ್ದ ಅರ್ನಬ್ ಗೋಸ್ವಾಮಿ ಅವರಿ ನವೆಂಬರ್ ತಿಂಗಳಲ್ಲಿ ಟೈಮ್ಸ್ ನೌ ಸಂಪಾದಕ ಹುದ್ದೆಗೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡಿದ ನಂತರ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ವೇಳೆ ಮಾಧ್ಯಮಗಳ ಕಾರ್ಯನಿರ್ವಹಣೆ ಬಗ್ಗೆ ಮಾತನಾಡಿದ್ದ ಅರ್ನಬ್ ಗೋಸ್ವಾಮಿ ಭಾರತೀಯ ಮಾಧ್ಯಮ ಜಗತ್ತಿನಲ್ಲಿ ಪಶ್ಚಿಮದ ಏಕಾಧಿಪತ್ಯ ಅಂತ್ಯಗೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಟೈಮ್ಸ್ ಸಮೂಹದ ಸುದ್ದಿವಾಹಿನಿಯಿಂದ ಹೊರಬಂದ ನಂತರ ಅರ್ನಬ್ ಗೋಸ್ವಾಮಿ ತಮ್ಮದೇ ಆದ ಹೊಸ ಚಾನಲ್ ನ್ನು ಪ್ರಾರಂಭಿಸುತ್ತಿದ್ದಾರೆ.    

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT