ಅಸ್ಸಾಂ: ಅಸ್ಸಾಂ ರಾಜ್ಯದ ಪ್ರವಾಸೋದ್ಯಮ ಪ್ರಚಾರ ರಾಯಭಾರಿಯಾಗಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಅಸ್ಸಾಂ ಸರ್ಕಾರ ನೇಮಕ ಮಾಡಿದೆ.
‘ಈ ಮೊದಲು ನಮ್ಮ ರಾಜ್ಯದ ಪ್ರವಾಸೋದ್ಯಮದ ಪ್ರಚಾರ ರಾಯಭಾರಿಯಾಗುವಂತೆ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಅವರಿಗೆ ಆಹ್ವಾನ ನೀಡಿದ್ದೆವು. ಆದರೆ ಅವರು ಇದಕ್ಕೆ ಒಪ್ಪದ ಕಾರಣ ನಾವು ಪ್ರಿಯಾಂಕಾ ಚೋಪ್ರಾರಿಗೆ ಆಹ್ವಾನ ನೀಡಿದ್ದೆವು. ನಮ್ಮ ಮನವಿಯನ್ನು ಪುರಸ್ಕರಿಸಿರುವ ಅವರು ಯಾವುದೇ ಸಂಭಾವನೆ ಪಡೆಯದೆ, ರಾಯಭಾರಿಯಾಗುವುದಾಗಿ ಒಪ್ಪಿಕೊಂಡ್ಡಿದ್ದಾರೆ. ಅಲ್ಲದೆ ಈ ಸಂಬಂಧ ಈಗಾಗಲೇ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ’ ಎಂದು ಪ್ರವಾಸೋದ್ಯಮ ಸಚಿವ ಹಿಮಾಂತ ಬಿಸ್ವ ಶರ್ಮಾ ಅವರು ತಿಳಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅವರಿಗೆ ನಾವು ಕೇವಲ ಶೂಟಿಂಗ್ ಹಾಗೂ ಜಾಹೀರಾತು ವೆಚ್ಚವನ್ನಷ್ಟೇ ನೀಡಲಿದ್ದೇವೆ ಎಂದೂ ಸಹ ಅವರು ಸ್ಪಷ್ಟಪಡಿಸಿದ್ದಾರೆ.