ದೇಶ

ದೆಹಲಿ: ಉಷ್ಣಾಂಶ ಮತ್ತಷ್ಟು ಕುಸಿತ, ಹಲವು ರೈಲು, ವಿಮಾನ ಸಂಚಾರ ವಿಳಂಬ

Sumana Upadhyaya
ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಇಂದು ದಟ್ಟ ಮಂಜು ಕವಿದಿರುವುದರಿಂದ 24 ರೈಲುಗಳು ನಿಗದಿತ ವೇಳೆಗಿಂತ ತಡವಾಗಿ ಹೊರಡಲಿವೆ. ಒಂದು ರೈಲಿನ ಸಂಚಾರ ರದ್ದಾಗಿದೆ. 
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 6 ಅಂತಾರಾಷ್ಟ್ರೀಯ ಮತ್ತು 8 ದೇಶೀಯ ವಿಮಾನಗಳ ಹಾರಾಟ ಕೂಡ ವಿಳಂಬವಾಗಿದೆ.
ದೆಹಲಿಯಲ್ಲಿ ಕಳೆದೆರಡು ದಿನಗಳಿಂದ ತಾಪಮಾನ ಸಾಮಾನ್ಯಕ್ಕಿಂತ ಕನಿಷ್ಟ ಮಟ್ಟದಲ್ಲಿದೆ. ಈ ವರ್ಷದ ಚಳಿಗಾಲದಲ್ಲಿ ಇಲ್ಲಿಯವರೆಗಿನ ತಾಪಮಾನದಲ್ಲಿ ನಿನ್ನೆ ಅತ್ಯಂತ ಕನಿಷ್ಟ ಉಷ್ಣಾಂಶ ಕಂಡುಬಂದಿದ್ದು 7.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. 
ಹವಾಮಾನ ಇಲಾಖೆಯ ಅಧಿಕಾರಿಗಳು, ಉತ್ತರ ಮತ್ತು ಪಶ್ಚಿಮ ದಿಕ್ಕುಗಳಿಂದ ಬೀಸುವ ಗಾಳಿಯಿಂದಾಗಿ ಇಷ್ಟೊಂದು ಕನಿಷ್ಠ ಉಷ್ಣಾಂಶವಿದೆ. ಮುಂದಿನ ಮೂರ್ನಾಲ್ಕು ದಿನಗಳವರೆಗೆ ಉಷ್ಣಾಂಶ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. 
SCROLL FOR NEXT