ಸಂಗ್ರಹ ಚಿತ್ರ 
ದೇಶ

ರಾಷ್ಟ್ರಗೀತೆ ವಿವಾದ: ಕೇರಳ ಲೇಖಕನ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲು

ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆಂಬ ಆರೋಪ ಮೇರೆಗೆ ಮಲಯಾಳಂ ಲೇಖಕ ಹಾಗೂ ನಾಟಕ ಕಲಾವಿದ ಕಮಲ್ ಸಿ ಚಲಾವ ಅಲಿಯಾಸ್ ಕಮಲ್ಸಿ ಅವರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಾಗಿದೆ...

ತಿರುವನಂತಪುರ: ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆಂಬ ಆರೋಪ ಮೇರೆಗೆ ಮಲಯಾಳಂ ಲೇಖಕ ಹಾಗೂ ನಾಟಕ ಕಲಾವಿದ ಕಮಲ್ ಸಿ ಚಲಾವ ಅಲಿಯಾಸ್ ಕಮಲ್ಸಿ ಅವರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಾಗಿದೆ ಎಂದು ಸೋಮವಾಲ ತಿಳಿದುಬಂದಿದೆ.

ನಿನ್ನಯಷ್ಟೇ ಕಮಲ್ ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ವೊಂದನ್ನು ಹಾಕಿದ್ದರು. ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಕಮಲ್ ಅವರು, 'ಸ್ಮಶಾನಂಗಳುದೆ ನೋಟ್ ಪುಸ್ತಕಂ' ಕಾದಂಬರಿಯ ಕೆಲ ಅಂಶಗಳನ್ನು ಹಾಕಿದ್ದರು. ಇದಕ್ಕೆ ಬಿಜೆಪಿಯ ಯುವ ಮೋರ್ಚಾ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಕಮಲ್ ಅವರು ರಾಷ್ಟ್ರಗೀತೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ದೂರನ್ನು ದಾಖಲಿಸಿತ್ತು.

ಈ ದೂರನ್ನು ಪರಿಗಣಿಸಿರುವ ಕೇರಳದ ನಡಕ್ಕಾವು ಪೊಲೀಸರು, ಲೇಖಕ ಕಮಲ್ ಅವರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿಕೊಂಡು ನಿನ್ನೆ ಲೇಖಕನ್ನು ಬಂಧನಕ್ಕೊಳಪಡಿಸಿದೆ ಹೇಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT