ಕೋಲ್ಕತಾ: ಭಾರತೀಯ ಸೇನೆ ಮೇಲೆ ನಮಗೆ ಸಂಪೂರ್ಣವಾದ ವಿಶ್ವಾಸವಿದ್ದು, ಸೇನಾ ವಿಚಾರದಲ್ಲಿ ಬಿಜೆಪಿಯಂತೆ ನಾವು ಎಂದಿಗೂ ರಾಜಕೀಯ ಆಟ ಆಡಿಲ್ಲ. ಮುಂದೆ ಎಂದಿಗೂ ಆಡುವುದೂ ಇಲ್ಲ ಎಂದು ಕಾಂಗ್ರೆಸ್ ಸೋಮವಾರ ಹೇಳಿದೆ.
ಭೂಸೇನಾ ಮುಖ್ಯಸ್ಥರಾಗಿ ಲೆ.ಜ. ಬಿಪಿನ್ ರಾವತ್ ಅವರನ್ನು ಆಯ್ಕೆ ಮಾಡಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಪ್ರದೀಪ್ ಭಟ್ಟಾಚಾರ್ಯ ಅವರು, ಯಾವುದು ಮಾಡಬೇಕು ಹಾಗೂ ಯಾವುದು ಮಾಡಬಾರದುಎಂಬುದು ಕಾಂಗ್ರೆಸ್ ತಿಳಿಸಿದೆ. ಭಾರತೀಯ ಸೇನೆ ಮೇಲೆ ನಮಗೆ ಸಂಪೂರ್ಣವಾದ ವಿಶ್ವಾಸವಿದೆ. ಭಾರತೀಯ ಸೇನೆ ಸಾರ್ವಜನಿಕ ಸಂಸ್ಥೆಯಾಗಿದ್ದು, ಸೇನಾ ವಿಚಾರದಲ್ಲಿ ಬಿಜೆಪಿಯಂತೆ ನಾವು ಎಂದಿಗೂ ರಾಜಕೀಯ ಮಾಡಿಲ್ಲ ಎಂದು ಹೇಳಿದ್ದಾರೆ.
ಸೇನೆಯಲ್ಲಿರುವ ಹಿರಿಯ ಅಧಿಕಾರಿಗಳನ್ನು ಕಡೆಗಣಿಸಿ ರಾವತ್ ಅವರನ್ನು ನೇಮಿಸಿರುವುದಕ್ಕೆ ವಿರೋಧ ಪಕ್ಷಗಳು ಟೀಕೆಗಳನ್ನು ವ್ಯಕ್ತಪಡಿಸಿದ್ದವು. ರಾವತ್ ಅವರನ್ನು ನೇಮಿಸಿರುವುದರ ಹಿಂದೆ ಏನಾದರೂ ಉದ್ದೇಶವಿದೆಯೇ? ಬಲವಾದ ಕಾರಣಗಳೇನಾದರೂ ಇವೇಯೇ ಎಂಬುದರ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಪಷ್ಟನೆ ನೀಡಬೇಕಿದೆ ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದರು.