ದೇಶ

ಎಲ್ಒಸಿ ಬಳಿ ಗಣಿ ಸ್ಫೋಟ: ಓರ್ವ ಯೋಧ ಗಾಯ

Manjula VN

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಗಣಿ ಸ್ಫೋಟಗೊಂಡಿದ್ದು, ಯೋಧನೋರ್ವ ಗಂಭೀರಾಗಿ ಗಾಯಗೊಂಡಿರುವ ಘಟನೆ ಸೋಮವರಾ ರಾತ್ರಿ ನಡೆದಿದೆ.
 
ಪೂಂಚ್ ಜಿಲ್ಲೆ ಮೆಂಧಾರ್ ಸೆಕ್ಟರ್'ನ ಕಾಲು ದಾರಿಯಲ್ಲಿ ಬಂಡೆಯೊಂದು ಉರುಳಿ ಬಂದಿದೆ. ಈ ವೇಳೆ ಸ್ಫೋಟ ಸಂಭವಿಸಿತ್ತು ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.

ಯೋಧ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದ್ದು, ಗಾಯಗೊಂಡ ಯೋಧನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

SCROLL FOR NEXT