ಹೈದರಾಬಾದ್: ದಿಲ್ ಖುಷ್ ನಗರ ಅವಳಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಯಾಸೀನ್ ಭಟ್ಕಳ್ ಮತ್ತು ಆತನ ಸಹಚರರಿಗೆ ಎನ್ ಐ ಎ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
ನನ್ನ ಅಣ್ಣ ಮುಗ್ಧ, ಈ ಪ್ರಕರಣ ಸಂಬಂಧ ಆತ ನನಗೆ ಮೊದಲೇ ಮಾಹಿತಿ ನೀಡಿದ್ದ. ರಾಷ್ಟ್ರೀಯ ತನಿಖಾ ದಳ ನನ್ನ ವಿರುದ್ಧ ಪಿತೂರಿ ಮಾಡುತ್ತಿದೆ ಎಂದು ಆತ ಶಂಕಿಸಿದ್ದ. ಎನ್ ಐ ಎ ಕೋರ್ಟ್ ನೀಡಿರುವ ತೀರ್ಪಿನಲ್ಲಿ ನಮಗೆ ನಂಬಿಕೆಯಿಲ್ಲ. ಯಾದ ಕಾರಣಕ್ಕಾಗಿ ನನ್ನ ಸಹೋದರನ ಮೇಲೆ ಈ ಆರೋಪ ಹೊರಿಸಲಾಗಿದೆ ಎಂದು ತಿಳಿದಿಲ್ಲ ಎಂದು ಇಂಡಿಯನ್ ಮುಜಾಹಿದ್ದೀನ್ ಸಂಘ
ಟಕ ಹಾಗೂ ಯಾಸೀನ್ ಭಟ್ಕಳ್ ಕಿರಿಯ ಸಹೋದರ ಅಬ್ದುಲ್ ಸಮಾದ್ ಹೇಳಿದ್ದಾನೆ.
ದಿಲ್ ಖುಷ್ ನಗರದಲ್ಲಿ ಸ್ಫೋಟ ನಡೆದಾಗ ಯಾಸೀನ್ ಹೈದರಾಬಾದ್ ನಲ್ಲಿ ಇರಲಿಲ್ಲ. ಹೀಗಿದ್ದಾಗ ಆತ ಹೇಗೆ ಸ್ಫೋಟಕ್ಕೆ ಕಾರಣನಾಗುತ್ತಾನೆ. ಶಿಕ್ಷೆ ಘೋಷಣೆ ಆಗುವುದಕ್ಕೂ ಮುನ್ನ ನಾನು ನನ್ನ ಸಹೋದರನನ್ನು ಭೇಟಿಯಾಗಿದ್ದೆ, ಆತ ನಾನು ಮುಗ್ಧ ನನಗೇನು ಗೊತ್ತಿಲ್ಲ ಎಂದು ಯಾವಾಗಲೂ ಹೇಳುತ್ತಾನೆ ಎಂದು ಸಮಾದ್ ತಿಳಿಸಿದ್ದಾನೆ.
ನನ್ನ ಸಹೋದರನಿಗೆ ಎನ್ ಐ ಎ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸುತ್ತೇನೆ ಎಂದು ಸಮದ್ ಹೇಳಿದ್ದಾನೆ.
ಸ್ಫೋಟ ಪ್ರಕರಣದಲ್ಲಿ ಯಾಸೀನ್ ಪಾತ್ರವಿಲ್ಲ ಎಂದು ನಮಗೆ ನಂಬಿಕೆಯಿದೆ. ಆದರೆ ರಾಷ್ಟ್ರೀಯ ತನಿಖಾ ದಳ ಮಾತ್ರ ಪ್ರಕರಣದಲ್ಲಿ ಯಾಸೀನ್ ಭಟ್ಕಳ್ ಪಾತ್ರವಿದೆ ಎಂದು ಎನ್ ಐ ಎ ಹೇಳುತ್ತಿದೆ. ತೀರ್ಪಿನ ಪ್ರತಿ ನಮ್ಮ ಕೈ ಸೇರಿದ ಕೂಡಲೇ ಹೈಕೋರ್ಟ್ ನಲ್ಲಿ ಎನ್ ಐಎ ವಿಶೇಷ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಅಪೀಲು ಸಲ್ಲಿಸುತ್ತೇವೆ ಎಂದು ಯಾಸೀನ್ ಭಟ್ಕಳ್ ಪರ ವಕೀಲ ಮಹದೇವನ್ ತಿಳಿಸಿದ್ದಾರೆ.