ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

25 ಕೋಟಿ ರೂ. ಮೌಲ್ಯದ ಹಳೇಯ ನೋಟು ಬದಲಾವಣೆಗೆ ಯತ್ನ: ಉದ್ಯಮಿ ಪರಸ್ಮಲ್ ಲೋಧಾ ಬಂಧನ

25 ಕೋಟಿ ಮೌಲ್ಯದ ಹಳೇಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಲು ಯತ್ನಿಸುತ್ತಿದ್ದ...

ಸಾಂದರ್ಭಿಕ ಚಿತ್ರ
Shilpa D
Updated On : 22 Dec 2016, 1:24 am

ಕೊಲ್ಕೊತಾ: 25 ಕೋಟಿ ಮೌಲ್ಯದ ಹಳೇಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಲು ಯತ್ನಿಸುತ್ತಿದ್ದ ಪರಸ್ಮಲ್ ಲೋಧಾ ಎಂಬ ಉದ್ಯಮಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಆತನಿಂದ 500 ಹಾಗೂ 1000 ರು ಮೌಲ್ಯದ ಹಳೇಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನವೆಂಬರ್ 8 ರಂದು 500 ಹಾಗೂ 1000 ರು ಮೌಲ್ಯದ ನೋಟುಗಳನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿದ ಮೇಲೆ ಡಿಸೆಂಬರ್ 1 ರಿಂದ ಜಾರಿ ನಿರ್ದೇಶನಾಲಯ ಹವಾಲಾ ಹಣ ನಿರ್ವಾಹಕರ ಮೇಲೆ ದಾಳಿ ನಡೆಸಿ ಕೋಟ್ಯಾಂತರ ರು ಮೌಲ್ಯದ ಕಪ್ಪು ಹಣವನ್ನು ವಶ ಪಡಿಸಿಕೊಂಡಿದ್ದಾರೆ.

ಗುಪ್ತಚರ ಇಲಾಖೆ ಮಾಹಿತಿ ಆಧಾರದ ಮೇಲೆ ದೆಹಲಿ, ಮುಂಬಯಿ,ಕೊಲ್ಕೋತಾ, ಹೈದರಾಬಾದ್, ಬೆಂಗಳೂರು , ಅಹಮದಾಬಾದ್ ಹಾಗೂ ಚೆನ್ನೈ ಸೇರಿದಂತೆ ಹಲವು ನಗರಗಳಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿ ಕಪ್ಪು ಹಣವನ್ನು ಬಿಳಿ ಮಾಡಲು ಯತ್ನಿಸುತ್ತಿದ್ದವರನ್ನು ಬಂಧಿಸಿ, ಅವರಿಂದ ಹಣವನ್ನು ಜಪ್ತಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement