ಗೋವಾ: ವಿಜಯ್ ಮಲ್ಯಾ ಕಿಂಗ್ ಫಿಶರ್ ವಿಲ್ಲಾ ಖರೀದಿಸುವವರೇ ಇಲ್ಲ!
ಗೋವಾದಲ್ಲಿರುವ ವಿಜಯ್ ಮಲ್ಯಾ ಅವರ ಕಿಂಗ್ ಫಿಶರ್ ವಿಲ್ಲಾ ಹರಾಜು ಪ್ರಕ್ರಿಯೆ ಎರಡನೇ ಬಾರಿ ವಿಫಲಗೊಂಡಿದೆ.
ಗೋವಾ: ಗೋವಾದಲ್ಲಿರುವ ವಿಜಯ್ ಮಲ್ಯಾ ಅವರ ಕಿಂಗ್ ಫಿಶರ್ ವಿಲ್ಲಾ ಹರಾಜು ಪ್ರಕ್ರಿಯೆ ಎರಡನೇ ಬಾರಿ ವಿಫಲಗೊಂಡಿದೆ. ಡಿ.22ರಂದು ಎಸ್ ಬಿಐ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ವಿಲ್ಲಾ ಖರೀದಿಸಲು ಯಾರೂ ಮುಂದಾಗಲಿಲ್ಲ. ಪರಿಣಾಮ ವಿಲ್ಲಾ ಹರಾಜು ಪ್ರಕ್ರಿಯೆ ಎರಡನೇ ಬಾರಿಗೆ ವಿಫಲವಾಗಿದೆ.
ಈ ಮೊದಲು ಅಕ್ಟೋಬರ್ ನಲ್ಲಿ ಕಿಂಗ್ ಫಿಶರ್ ವಿಲ್ಲಾವನ್ನು ಹರಾಜು ಹಾಕಲಾಗಿತ್ತು. ಆಗಲೂ ವಿಜಯ್ ಮಲ್ಯಾ ಅವರ ವಿಲ್ಲಾವನ್ನು ಖರೀದಿಸಲು ಯಾರೂ ಮುಂದಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಮೂಲ ಬೆಲೆಗಿಂತ ಶೇ.5ರಷ್ಟು ವಿನಾಯ್ತಿ ನೀಡಿ 85.29 ಕೋಟಿಯ ಹರಾಜು ಮೊತ್ತವನ್ನು 81 ಕೋಟಿಗೆ ಇಳಿಕೆ ಮಾಡಲಾಗಿತ್ತು. ಆದರೆ ಈ ಬಾರಿಯೂ ಸಹ ವಿಲ್ಲಾವನ್ನು ಖರೀದಿಸಲು ಯಾರೂ ಮುಂದಾಗಿಲ್ಲ.
ಇದಕ್ಕೂ ಮುನ್ನ ಮುಂಬೈ ನ ಕಿಂಗ್ ಫಿಶರ್ ಬಂಗಲೆ ಹರಾಜು ಪ್ರಕ್ರಿಯೆಗೂ ಇದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಾವಿರಾರು ಕೋಟಿ ಸಾಲ ತೀರಿಸದೇ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ಪಡೆದುಕೊಂಡಿದ್ದ ಸಾಲದ ಹಣವನ್ನು ವಾಪಸ್ ಪಡೆಯಲು ಬ್ಯಾಂಕ್ಗಳು ದೇಶದಲ್ಲಿರುವ ಅವರ ಆಸ್ತಿಯನ್ನು ಹರಾಜಿಗಿಡುತ್ತಿವೆ. ಕಿಂಗ್ ಫಿಶರ್ ಹೌಸ್ನ್ನು ಕೊಳ್ಳುವವರು ಯಾರು ಇಲ್ಲವಾಗಿದೆ. ಹರಾಜಿಗ್ಗಿಟ್ಟಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಮತ್ತೆ ನಿರಾಶೆಯಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.