ದೇಶ

ಸಿಬಿಎಸ್ ಇ ಬೋರ್ಡ್ ಪರೀಕ್ಷೆ ಮತ್ತು ತ್ರಿಭಾಷಾ ಅಧ್ಯಯನ ಸೂತ್ರಕ್ಕೆ ವಿದ್ಯಾರ್ಥಿಗಳು, ಪೋಷಕರ ಪ್ರತಿಕ್ರಿಯೆ

Sumana Upadhyaya
ಚೆನ್ನೈ: ಹತ್ತನೇ ತರಗತಿಗೆ 2018ರಿಂದ ಬೋರ್ಡ್ ಪರೀಕ್ಷೆ ಕಡ್ಡಾಯ ಮಾಡುವ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ ನಿರ್ಧಾರವನ್ನು  ಬಹುಪಾಲು ಪೋಷಕರು ಮತ್ತು ವಿದ್ಯಾರ್ಥಿಗಳು ಸ್ವಾಗತಿಸಿದ್ದಾರೆ.ಆದರೆ ತ್ರಿಭಾಷಾ ಸೂತ್ರಕ್ಕೆ ಬಹುಪಾಲು ಪೋಷಕರು ಮತ್ತು ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಆದರೆ ಕೆಲವು ವಿದ್ಯಾರ್ಥಿಗಳು ಮಾತ್ರ ಅಂಕ ಗಳಿಸಲು ಬೋರ್ಡ್ ಪರೀಕ್ಷೆಗಿಂತ ನಿರಂತರ ಸಮಗ್ರ ಮೌಲ್ಯಮಾಪನ(ಸಿಸಿಇ) ಒಳ್ಳೆಯದು ಎಂದು ಹೇಳಿದ್ದಾರೆ. 
ಚೆನ್ನೈನ ಶೇಶಾದ್ರಿ ಬಾಲಾ ವಿದ್ಯಾಭವನ ಶಾಲೆಯ 12ನೇ ತರಗತಿ ವಿದ್ಯಾರ್ಥಿನಿ ಆರ್.ಎಸ್.ಸುಶ್ಮಿತಾ, ಬೋರ್ಡ್ ಪರೀಕ್ಷೆಯನ್ನು ಮತ್ತೆ ಜಾರಿಗೆ ತರುತ್ತಿರುವುದು ಖುಷಿಯ ವಿಚಾರ. ನಮ್ಮ ಶಾಲೆಯಲ್ಲಿ ಸಿಸಿಇ ತುಂಬಾ ಕಷ್ಟವಾಗಿರುತ್ತದೆ. ಬೋರ್ಡ್ ಪರೀಕ್ಷೆ ವಿದ್ಯಾರ್ಥಿಗಳಿಗೆ ಸುಲಭವಾಗುತ್ತದೆ ಎನ್ನುತ್ತಾಳೆ. ಇನ್ನು ತ್ರಿಭಾಷಾ ಸೂತ್ರ ಜಾರಿಗೆ ತಂದರೆ ಹಿಂದಿ ಭಾಷೆ ಇರುವುದು ಉತ್ತಮ. ಸಂಸ್ಕೃತವನ್ನು ಮೂರನೇ ಭಾಷೆಯಾಗಿ ಮತ್ತೆ ಜಾರಿಗೆ ತಂದರೆ ಯಾವುದೇ ಉದ್ದೇಶ ಈಡೇರುವುದಿಲ್ಲ ಎನ್ನುತ್ತಾಳೆ.
ಇದೇ ಶಾಲೆಯ ಮತ್ತಿಬ್ಬರು ವಿದ್ಯಾರ್ಥಿಗಳಾದ ಕೆ.ಆನಂದ್ ಮತ್ತು ಆರ್ ಸಯೀ ಕೂಡ 10ನೇ ತರಗತಿಗೆ ಬೋರ್ಡ್ ಪರೀಕ್ಷೆಯನ್ನು ಸ್ವಾಗತಿಸುತ್ತಾರೆ.ಸಯೀಗೆ ಮೂರನೇ ಭಾಷೆಯಾಗಿ ಸಂಸ್ಕೃತವನ್ನು ಕಲಿಯುವುದು ಬಹಳ ಇಷ್ಟವಂತೆ ಮತ್ತು ಅದರಲ್ಲಿ ಉತ್ತಮ ಅಂಕ ಗಳಿಸಬಹುದು ಎನ್ನುತ್ತಾನೆ.
ಕೆ.ಎಸ್.ಕುಮಾರ್ ಎನ್ನುವ ಪೋಷಕರು ಶಿಕ್ಷಣದ ಗುಣಮಟ್ಟ ಕಡಿಮೆಯಾದಾಗ ಮಕ್ಕಳು ಕಲಿಯುವ ಮಟ್ಟ ಮತ್ತು ಹಾಕಬೇಕಾದ ಪರಿಶ್ರಮ ಹೆಚ್ಚಿರುತ್ತದೆ. ಇಂದಿನ ದಿನಗಳಲ್ಲಿ ಮಕ್ಕಳಿಗೆ ನಿರಂತರ ಸಮಗ್ರ ಮೌಲ್ಯಮಾಪನದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಬೋರ್ಡ್ ಪರೀಕ್ಷೆಯೆಂದರೆ ಮಕ್ಕಳಿಗೆ ಹೆಚ್ಚು ಗಾಂಭೀರ್ಯತೆ ಉಂಟಾಗುತ್ತದೆ ಎನ್ನುತ್ತಾರೆ.
SCROLL FOR NEXT