ನವದೆಹಲಿ: ನಿದ್ರಾ ಸುಂದರ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಈಗಲಾದರೂ ಎಚ್ಚೆತ್ತು ನೋಟು ನಿಷೇಧದ ಬಗ್ಗೆ ಹಾಡುತ್ತಿರುವ ರಾಗ ನಿಲ್ಲಿಸಲಿ ಎಂದು ಬಿಜೆಪಿ ಸಂಸದೆ ಪೂನಂ ಮಹಾಜನ್ ಲೇವಡಿ ಮಾಡಿದ್ದಾರೆ.
ನಾನು ಯಾವಾಗ ಸಂಸತ್ತಿಗೆ ಹೋದರು ರಾಹುಲ್ ಗಾಂಧಿ ನಿದ್ರಿಸುತ್ತಿರುತ್ತಾರೆ. ಅವರು ಅಲ್ಲಿ ಹಣದುಬ್ಬರ, ನೋಟು ರದ್ದತಿಯ ಬಗ್ಗೆ ಮಾತನಾಡುತ್ತಾರೆ ಎಂದುಕೊಂಡಿದ್ದೆ. ಕಡೇಪಕ್ಷ ಅವರು ಎದ್ದೇಳಲಿ. ದೇಶ ಎಚ್ಚರಗೊಂಡಿದೆ. ನೀವು ಯಾವಾಗ ಏಳುವಿರಿ?’ ಎಂದು ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಮುಂಬೈನ ಉತ್ತರ ಕೇಂದ್ರ ವಿಭಾಗದ ಸಂಸದೆಯಾಗಿರುವ 36 ವರ್ಷದ ಪೂನಂ ಅವರು, ಅನುರಾಗ್ ಠಾಕೂರ್ ಅವರಿಂದ ತೆರವಾಗಿದ್ದ ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ನೋಟು ನಿಷೇಧದ ಬಗ್ಗೆ ಟೀಕೆ ಮಾಡುವುದನ್ನು ಇಂಥಹ ನಾಯಕರು ನಿಲ್ಲಿಸಬೇಕು. ದೇಶಕ್ಕೆ ಸುವರ್ಣಯುಗ ಆರಂಭವಾಗಿದೆ ಎಂದು ಪೂನಂ ಮಹಾಜನ್ ಹೇಳಿದ್ದಾರೆ.