ದೇಶ

ತಮಿಳುನಾಡು: ಮಹಿಳಾ ಪೇದೆ ಮೇಲೆ ಆ್ಯಸಿಡ್ ದಾಳಿ

Manjula VN

ವೆಲ್ಲೂರ್: ಮಹಿಳಾ ಪೇದೆಯೊಬ್ಬರ ಮೇಲೆ ದುಷ್ಕರ್ಮಿಯೊಬ್ಬ ಆ್ಯಸಿಡ್ ದಾಳಿ ನಡೆಸಿರುವ ಘಟನೆಯೊಂದು ತಿರುಪತ್ತೂರಿನ ವೆಲ್ಲೂರ್'ನಲ್ಲಿ ಶುಕ್ರವಾರ ನಡೆದಿದೆ.

ಆ್ಯಸಿಡ್ ದಾಳಿಯಿಂದಾಗಿ ಮಹಿಳಾ ಪೇದೆ ಮುಖ ಹಾಗೂ ಬಲಗೈಗೆ ಗಂಭೀರವಾದ ಗಾಯವಾಗಿದ್ದು, ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಆ್ಯಸಿಡ್ ದಾಳಿಗೊಳಗಾದ ಮಹಿಳಾ ಪೇದೆಯನ್ನು ಲಾವಣ್ಯ (29) ಎಂದು ಗುರ್ತಿಸಲಾಗಿದೆ. ಲಾವಣ್ಯ ಅವರು ಕರ್ತವ್ಯ ನಿರ್ವಹಿಸಿದ ಬಳಿಕ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಮುಸುಕುಧಾರಿಯಾಗಿ ಬಂದಿರುವ ವ್ಯಕ್ತಿಯೊಬ್ಬ ಆ್ಯಸಿಡ್ ದಾಳಿ ಮಾಡಿ, ಸ್ಥಳದಿಂದ ಪರಾರಿಯಾಗಿದ್ದಾನೆಂದು ತಿಳಿದುಬಂದಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಐದು ತಂಡಗಳನ್ನು ರಚಿಸಿ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ಆರಂಭಿಸಿದ್ದಾರೆ.

SCROLL FOR NEXT