ದೇಶ

ಡೆಸ್ಕ್ ಟಾಪ್, ಚಿಕ್ಕಿ, ಮ್ಯಾಗಿ : ಇಸಿಸ್ ನೇಮಕಾತಿಗೆ ಉಗ್ರರ ಕೋಡ್ ವರ್ಡ್ಸ್

Shilpa D

ಹೈದರಾಬಾದ್: ಜುಂದ್- ಉಲ್- ಖಲಿಫಾ-ಫೀ- ಬಿಲಾದ್-ಆಲ್- ಹಿಂದ್ ಉಗ್ರ ಸಂಘಟನೆಯ ಸದಸ್ಯರು ಸಂಭಾಷಣೆ ನಡೆಸುವಾಗ ಯಾರಿಗೂ ತಿಳಿಯದಿರಲಿ ಎಂಬ ಉದ್ದೇಶದಿಂದ ಚಿಕ್ಕಿ, ಟಾಲ್ಕಂ ಪೌಡರ್, ಮ್ಯಾಗಿ, ಎಂಬ ಕೋರ್ಡ್ ವರ್ಡ್ ಗಳನ್ನು ಬಳಸುತ್ತಿದ್ದರು ಎಂದು ರಾಷ್ಟ್ರೀಯ ತನಿಖಾ ದಳ ದ ತನಿಖೆಯಿಂದ ತಿಳಿದು ಬಂದಿದೆ.

ಯಾಜ್ದಾನಿ ಸಹೋದರರು ಸೇರಿದಂತೆ ಒಟ್ಟು 8 ಮಂದಿ ವಿರುದ್ಧ ಎನ್ ಐಎ ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇವರು ಇಸಿಸ್ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನು ಕೆಲವು ಸಂಭಾಷಣೆಗಳಲ್ಲಿ ಶಸ್ತ್ರಾಸ್ತ್ರಗಳಿಗೆ  ಡೆಸ್ಕ್ ಟಾಪ್ ಎಂಬ ಕೋಡ್ ಯೂಸ್ ಮಾಡಿದ್ದಾರೆ.ಒಂದು ಅಥವಾ ಎರಡು ಡೆಸ್ಕ್ ಟಾಪ್ ಗಳು ತರಬೇತಿಗೆ ಬರಲಿವೆ ಎಂಬುದಾಗಿ ಸಂಭಾಷಣೆ ನಡೆಸಿದ್ದಾರೆ.

2015 ರಲ್ಲಿ ಪ್ಯಾರಿಸ್ ನಲ್ಲಿ ಇಸಿಸ್ ನಿಂದ ನಡೆದ ದಾಳಿಯಲ್ಲಿ ಭಯೋತ್ಪಾದಕರು ಬಳಸಿರುವ ವಸ್ತುಗಳಿಗೂ,  ಬಂಧಿತರಿಂದ ವಶ ಪಡಿಸಿಕೊಂಡಿರುವ ಕೆಮಿಕಲ್ ಹಾಗೂ ಕೆಲಸ ವಸ್ತುಗಳಿಗೂ ಸಾಮ್ಯತೆ ಇದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ಸಾಬೀತು ಪಡಿಸಿದೆ,

ಹೈದರಾಬಾದ್ ನ ಕೆಲ ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಲು ಅವರು ಸಂಚು ರೂಪಿಸಿದ್ದರು ಎಂದು ಅವರ ಬಳಿ ವಶ ಪಡಿಸಿಕೊಂಡಿರುವ ಮ್ಯಾಪ್ ಗಳಿಂದ ತಿಳಿದು ಬಂದಿದೆ, ಉಗ್ರರು ತಾವು ನಡೆಸಿರುವ ಸಂಭಾಷಣೆಯನ್ನು ಗೌಪ್ಯವಾಗಿರಿಸಲು ಅತ್ಯಂತ ರಕ್ಷಣಾತ್ಮಕವಾದ ಆ್ಯಪ್ ಗಳನ್ನು ಬಳಸಿದ್ದಾರೆ. ಹೀಗಾಗಿ ಡಿಲೀಟ್ ಆಗಿರುವ ಸಂಭಾಷಣೆ  ಪಡೆಯಲು ಎನ್ಐಎ ತಂಡ ಪ್ರಯಸ್ನಿಸುತ್ತಿದೆ.

ಈ ವರ್ಷದ ಜುಲೈನಲ್ಲಿ ಎನ್ ಐ ಎ ತಂಡ ಅಬ್ದುಲ್ಲಾ ಬಿನ್ ಅಹಮದ್ ಆಲ್  ಅಮೂದಿ, ಮೊಹಮದ್ ಇಬ್ರಾಹಿಂ, ಹಬೀಬ್ ಮೊಹಮದ್, ಮೊಹಮದ್ ಇಲಿಯಾಸ್, ಸೇರಿದಂತೆ ಒಟ್ಟು 7 ಮಂದಿಯನ್ನು ಬಂಧಿಸಿತ್ತು. ಬಂಧಿತ ಉಗ್ರರು ದೈಹಿಕ ತರಬೇತಿಗಾಗಿ ನಿಯಂತ್ರಿತ ಪ್ರದೇಶಗಳಾದ ಚೆವೆಲ್ಲಾ ಮತ್ತು ಮೊಯಿನಾ ಬಾದ್ ಪ್ರದೇಶಗಳನ್ನು ಬಳಸಿಕೊಳ್ಳುತ್ತಿದ್ದರು ಎಂದು ಎನ್ ಐ ಎ ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT