ಸಂಗ್ರಹ ಚಿತ್ರ 
ದೇಶ

ಸರಬ್ಜಿತ್ ಸಿಂಗ್ ಸಹೋದರಿ ದಲ್ಬೀರ್ ಕೌರ್ ಬಿಜೆಪಿಗೆ ಸೇರ್ಪಡೆ

ದಶಕಗಳ ಪಾಕಿಸ್ತಾನ ಜೈಲಲ್ಲಿ ಬಂಧಿಯಾಗಿ ಸಾವನ್ನಪ್ಪಿದ್ದ ಭಾರತೀಯ ಸರಬ್ಜಿತ್ ಸಿಂಗ್ ಅವರ ಸಹೋದರಿ ದಲ್ಬೀರ್ ಕೌರ್ ಭಾನುವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ನವದೆಹಲಿ: ದಶಕಗಳ ಪಾಕಿಸ್ತಾನ ಜೈಲಲ್ಲಿ ಬಂಧಿಯಾಗಿ ಸಾವನ್ನಪ್ಪಿದ್ದ ಭಾರತೀಯ ಸರಬ್ಜಿತ್ ಸಿಂಗ್ ಅವರ ಸಹೋದರಿ ದಲ್ಬೀರ್ ಕೌರ್ ಭಾನುವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಸತತ 23 ವರ್ಷಗಳ ಪಾಕಿಸ್ತಾನದ ಜೈಲಿನಲ್ಲಿದ್ದ ತಮ್ಮ ಸಹೋದರ ಸರಬ್ಜಿತ್ ಸಿಂಗ್ ಗಾಗಿ ದಶಕಗಳ ಕಾಲ ಹೋರಾಟ ಮಾಡಿದ್ದ ಆತನ ಸಹೋದರಿ ದಲ್ಬೀರ್ ಕೌರ್ ಅವರು ಇಂದು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ  ಸೇರ್ಪಡೆಯಾಗಿದ್ದಾರೆ. ಪಾಕಿಸ್ತಾನದ ಜೈಲಿನಲ್ಲಿದ್ದ ತಮ್ಮ ಸಹೋದರ ಸರಬ್ಜಿತ್ ಸಿಂಗ್ ಗಾಗಿ ಸತತ ಹೋರಾಟ ನಡೆಸಿದ್ದ ದಲ್ಬೀರ್ ಕೌರ್ ಅವರು 2005ರಿಂದಲೇ ಬಿಜೆಪಿ ಪಕ್ಷಕ್ಕೆ ಸನಿಹವಾಗಿದ್ದರು. ಸರಬ್ಜಿತ್ ಬಿಡುಗಡೆಗಾಗಿ  ದಲಬೀರ್ ಕೌರ್ ನಡೆಸಿದ್ದ ವಿವಿಧ ಪ್ರತಿಭಟನೆಗಳಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

ದಲಬೀರ್ ಕೌರ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವ ವಿಚಾರವನ್ನು ಪಂಜಾಬ್ ಪ್ರಾಂತ್ಯದ ಬಿಜೆಪಿ ಶಾಸಕ ಹಾಗೂ ಸಚಿವ ಸುರ್ಜಿತ್ ಜ್ಯಾನಿ ಸ್ಪಷ್ಟಪಡಿಸಿದ್ದಾರೆ. ಪಕ್ಷದ ಕಿಸಾನ್ ಮೋರ್ಚಾ ಕಾರ್ಯಕ್ರಮದಲ್ಲಿ ದಲಬೀರ್ ಕೌರ್  ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಅಚಾತುರ್ಯವಾಗಿ ಭಾರತದ ಗಡಿ ದಾಟಿ ಪಾಕಿಸ್ತಾನದ ಗಡಿಗೆ ಹೋಗಿದ್ದ ಭಾರತದ ಸರಬ್ಜಿತ್ ಸಿಂಗ್ ನನ್ನು ಪಾಕಿಸ್ತಾನದ ಸೇನಾಪಡೆಗಳು ಬಂಧಿಸಿದ್ದರು. ಅಲ್ಲದೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಸರಣಿ ಬಾಂಬ್  ಸ್ಫೋಟದಲ್ಲಿ ಈತನ ಕೈವಾಡವಿದೆ ಎಂದು ಆರೋಪಿಸಿ 1991ರಲ್ಲಿ ಆತನಿಗೆ ಪಾಕ್ ನ್ಯಾಯಾಲಯ ಗಲ್ಲುಶಿಕ್ಷೆ ನೀಡಿತ್ತು. ಭಾರತ ಸರ್ಕಾರದ ಸತತ ಒತ್ತಡ ಹಾಗೂ ವಿವಿಧ ಕಾರಣಗಳಿಂದಾಗಿ ಪಾಕಿಸ್ತಾನ ಸರ್ಕಾರ ಸರಬ್ಜಿತ್ ಸಿಂಗ್  ಗಲ್ಲು ಶಿಕ್ಷೆ ಪ್ರದಾನವನ್ನು 2008ರವರೆಗೂ ಮುಂದೂಡತ್ತ ಬಂದಿತ್ತು. 2013ರ ಏಪ್ರಿಲ್ ತಿಂಗಳಲ್ಲಿ ಲಾಹೋರ್ ಜೈಲಿನಲ್ಲಿ ಸರಬ್ಜಿತ್ ಸಿಂಗ್ ಅವರ ಮೇಲೆ ಸಹ ಖೈದಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದರು. ಸರಬ್ಜಿತ್ ರನ್ನು ಆಸ್ಪತ್ರೆಗೆ  ದಾಖಲು ಮಾಡಲಾಗಿತ್ತಾದರೂ ಆತ ಸಾವನ್ನಪ್ಪಿದ್ದ.

ಸರಬ್ಜಿತ್ ಹಾಗೂ ದಲ್ಬಿರ್ ಕೌರ್ ನ ಕಥೆಯ ಆಧಾರಿತ ಸಿನಿಮಾ 2016 ರಲ್ಲಿ ಸರಬ್ಜಿತ್ ಎಂಬ ಹೆಸರಿನಲ್ಲೇ ತೆರೆಕಂಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT