ಗಡಿಯಲ್ಲಿ ಭಾರತೀಯ ಸೇನೆ ( ಸಂಗ್ರಹ ಚಿತ್ರ)
ಭೋಪಾಲ್: ಪಾಕಿಸ್ತಾನ ಗಡಿ ಭಾಗದಲ್ಲಿ ಕದನ ವಿರಾಮ ಉಲ್ಲಂಘನೆ ಮಾಡುವುದನ್ನು ಮುಂದುವರೆಸಿದರೆ ಪಾಕ್ ಗಡಿಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಬೇಕೆಂದು ರಕ್ಷಣಾ ತಜ್ಞ ನಿವೃತ್ತ ಮೇಜರ್ ಜನರಲ್ ಎಸ್ಆರ್ ಸಿನ್ಹೋ ಅಭಿಪ್ರಾಯಪಟ್ಟಿದ್ದಾರೆ.
ಪಾಕ್ ಸೇನೆಯ ಯೋಧರ ಮೇಲೆ ಹೆಚ್ಚಿನ ಹಾನಿ ಸಂಭವಿಸುವವರೆಗೂ ಪಾಕಿಸ್ತಾನ ಬುದ್ಧಿ ಕಲಿಯುವುದಿಲ್ಲ. ಪಾಕಿಸ್ತಾನದಲ್ಲಿ ಹೊಸ ಸೇನಾ ಮುಖ್ಯಸ್ಥರು ಅಧಿಕಾರ ವಹಿಸಿಕೊಂಡ ಬಳಿಕ ಕದನ ವಿರಾಮ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗಲಿವೆ ಎಂದು ಭಾರತ ಭಾವಿಸಿತ್ತು ಆದರೆ ಹಾಗಾಗಲಿಲ್ಲ. ಈ ಹಿಂದಿನ ಪಾಕ್ ಸೇನಾ ಮುಖ್ಯಸ್ಥ ಪ್ರಧಾನಿ ನವಾಜ್ ಷರೀಫ್ ಅವರನ್ನು ನಿಯಂತ್ರಿಸುವ ವಿಷಯದಲ್ಲಿ ಹೆಚ್ಚು ಶಕ್ತಿ, ಪ್ರಭಾವ ಹೊಂದಿದ್ದರು ಎಂಡು ಸಿನ್ಹೋ ತಿಳಿಸಿದ್ದಾರೆ.
ಹೊಸ ಸೇನಾ ಮುಖ್ಯಸ್ಥರ ನೇಮಕವಾದ ನಂತರ ಪಾಕ್ ಪ್ರಧಾನಿ ಸಹ ಶಾಂತಿಯನ್ನು ಬಯಸುತ್ತಾರೆ ಎಂದು ಭಾರತ ಭಾವಿಸಿತ್ತು. ಆದರೆ ಗಡಿಯಲ್ಲಿ ಕದನ ವಿರಾಮ ಮತ್ತೆ ಉಲ್ಲಂಘನೆಯಾಗಿದೆ. ಕಾಶ್ಮೀರದ ವಿವಾದ ಬಗೆಹರಿಯುವವರೆಗೂ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮುಂದುವರೆಯಲಿದೆ ಎಂದು ಸಿನ್ಹೋ ಅಭಿಪ್ರಾಯಪಟ್ಟಿದ್ದಾರೆ.
ನಿರಂತರವಾಗಿ ನಡೆಯುತ್ತಿರುವ ಕದನ ವಿರಾಮ ಉಲ್ಲಂಘನೆಯನ್ನು ತಡೆಗಟ್ಟಲು ಭಾರತ ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್, ಸೀಮಿತ ದಾಳಿ ನಡೆಸಿರುವುದು ಸಾಲದು, ಈಗ ಭಾರತೀಯ ಸೇನೆ ಪಾಕಿಸ್ತಾನ ಸೇನೆಯ ಪೋಸ್ಟ್ ಗಳ ಮೇಲೆ ದಾಳಿ ನಡೆಸಿ ಪಾಕ್ ಸೇನೆಯಲ್ಲಿ ಹೆಚ್ಚು ಹಾನಿ ಉಂಟಾಗುವಂತೆ ಮಾಡಬೇಕು ಎಂದು ಸಿನ್ಹೋ ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics