ಸಾಂದರ್ಭಿಕ ಚಿತ್ರ 
ದೇಶ

ನಿಷೇಧಿತ ನೋಟ್ ಹೊಂದಿದ್ದರೆ ಕನಿಷ್ಠ 10 ಸಾವಿರ ರು.ದಂಡ, ಜೈಲು ಶಿಕ್ಷೆ ಇಲ್ಲ

ನೋಟು ನಿಷೇಧ ಬಳಿಕ ಕಾಳಧನಿಕರನ್ನು ಗುರಿ ಮಾಡಿಕೊಂಡಿರುವ ಕೇಂದ್ರ ಸರ್ಕಾರ ದಿನಕ್ಕೊಂದು ನಿಯಮಗಳನ್ನು ಜಾರಿಗೆ....

ನವದೆಹಲಿ: ನೋಟು ನಿಷೇಧ ಬಳಿಕ ಕಾಳಧನಿಕರನ್ನು ಗುರಿ ಮಾಡಿಕೊಂಡಿರುವ ಕೇಂದ್ರ ಸರ್ಕಾರ ದಿನಕ್ಕೊಂದು ನಿಯಮಗಳನ್ನು ಜಾರಿಗೆ ತರುತ್ತಿದ್ದು, ಇದೀಗ ಡಿಸೆಂಬರ್ 30ರ ಬಳಿಕವೂ ಹಳೆಯ ನಿಷೇಧಿತ ನೋಟುಗಳನ್ನು  ಹೊಂದಿದ್ದರೆ ಕನಿಷ್ಠ 10 ಸಾವಿರ ದಂಡ ವಿಧಿಸಲು ಮುಂದಾಗಿದೆ. ಆದರೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಗುರುವಾರ ಕೈಬಿಟ್ಟಿದೆ.
ಈ ಮುಂಚೆ 10ಕ್ಕಿಂತ ಹೆಚ್ಚು ಹಳೆ 500 ಹಾಗೂ 1000 ರುಪಾಯಿ ನೋಟ್ ಹೊಂದಿದ್ದರೆ 50 ಸಾವಿರ ರುಪಾಯಿ ದಂಡ ಹಾಗೂ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾಪ ಮಾಡಿತ್ತು. 
ಈ ಸಂಬಂಧ ಕೇಂದ್ರ ಸರ್ಕಾರ ಮತ್ತೊಂದು ಸುಗ್ರೀವಾಜ್ಞೆ ಹೊರಡಿಸಲು ಸಿದ್ಧವಾಗಿದ್ದು, ನೂತನ ಸುಗ್ರೀವಾಜ್ಞೆಯ ಪ್ರಕಾರ ಡಿಸೆಂಬರ್  30ರ ಬಳಿಕ ಯಾವುದೇ ವ್ಯಕ್ತಿ ತನ್ನ ಬಳಿ  10ಕ್ಕಿಂತಲೂ ಹೆಚ್ಚು ನಿಷೇಧಿತ ಹಳೆಯ ನೋಟುಗಳನ್ನು ಹೊಂದಿದ್ದರೆ ಆತನಿಗೆ ಕನಿಷ್ಠ 10 ಸಾವಿರ  ರು. ದಂಡ ಮತ್ತು ಹೊಂದಿದ್ದ ಹಣದ ಐದು ಪಟ್ಟು ದಂಡ ವಿಧಿಸಲು ಮುಂದಾಗಿದೆ. ಇದೇ ವೇಳೆ ಸಂಶೋಧಕರಿಗೆ 25 ನೋಟ್ ಗಳನ್ನು ಹೊಂದಲು ಅವಕಾಶ ನೀಡಲಾಗಿದೆ.
ಈ ಸುಗ್ರೀವಾಜ್ಞೆಯನ್ನು ಶೀಘ್ರದಲ್ಲೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸಹಿಗಾಗಿ ಕಳುಹಿಸಲಾಗುತ್ತಿದ್ದು, ಡಿಸೆಂಬರ್ 31ರಿಂದ ಇದು ಜಾರಿಗೆ ಬರಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಹಳೆಯ ನೋಟುಗಳನ್ನು ಬ್ಯಾಂಕುಗಳಿಗೆ ಜಮಾ ಮಾಡಲು ಡಿಸೆಂಬರ್ 31ರವರೆಗೂ ಕಾಲಾವಕಾಶವಿದ್ದು, ಡಿಸೆಂಬರ್ 31 ರ ಬಳಿಕ ಜಮೆಯಾಗುವ ಹಣಕ್ಕೆ ಬ್ಯಾಂಕು ಅಧಿಕಾರಿಗಳಿಗೆ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ. ಈ ಅಫಿಡವಿಟ್  ನಲ್ಲಿ ಹಣ ಜಮಾವಣೆಗೆ ಏಕೆ ತಡವಾಯಿತು? ಮತ್ತು ಹಣದ ಮೂಲ ಸೇರಿದಂತೆ ವಿವಿಧ ಪ್ರಶ್ನೆಗಳಿಗೆ ಕಡ್ಡಾಯವಾಗಿ ಉತ್ತರಿಸಬೇಕಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT