ನವದೆಹಲಿ: ಡಿಸೆಂಬರ್ 10ರಂದು ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ ನಲ್ಲಿನ ಕಾನೂನು ಸೇವಾ ಸಂಸ್ಥೆಯ ಮೇಲೇ ಕ್ರೈಂ ಬ್ರಾಂಚ್ ಪೊಲೀಸರು ದಾಳಿ ನಡೆಸಿ 13.65 ಕೋಟಿ ರುಪಾಯಿ ಅಕ್ರಮ ಹಣ ವಶಪಡಿಸಿಕೊಂಡಿದ್ದರು. ಪ್ರಕರಣ ಸಂಬಂಧ ಮಾಲೀಕ, ವಕೀಲ ರೋಹಿತ್ ಟಂಡನ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.
ಕ್ರೈಂ ಬ್ರಾಂಚ್ ಪೊಲೀಸರ ದಾಳಿ ಬಳಿಕ ವಕೀಲ ರೋಹಿತ್ ಟಂಡನ್ 125 ಕೋಟಿ ರುಪಾಯಿ ಕಾಳಧನವನ್ನು ಘೋಷಿಸಿಕೊಂಡಿದ್ದರು.
ವಿಚಾರಣೆ ವೇಳೇ ಕಪ್ಪುಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸುವಲ್ಲಿ ತಮಗೆ ನೆರವಾಗಿದ್ದ ಕೋಟಕ್ ಮಹೀಂದ್ರ ಬ್ಯಾಂಕ್ ಮ್ಯಾನೇಜರ್ ಆಶಿಶ್ ಕುಮಾರ್ ತಮ್ಮಿಂದ 51 ಕೋಟಿ ರುಪಾಯಿ ಪಡೆದಿರುವುದಾಗಿ ಟಂಡನ್ ಹೇಳಿದ್ದಾರೆ. ಆಶಿಶ್ ಅವರನ್ನು ಡಿಸೆಂಬರ್ 27ರ ರಾತ್ರಿ ಹಣ ದುರುಪಯೋಗ ಕಾಯ್ದೆ(ಪಿಎಂಎಲ್ಎ)ಯಡಿ ಪೊಲೀಸರು ಬಂಧಿಸಿದ್ದಾರೆ.