ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದೇಶ ಉದ್ದೇಶಿಸಿ ಮಾತನಾಡುವ ಮುನ್ನ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಮುಂದೆ ನಾಲ್ಕು ಬೇಡಿಕೆಗಳನ್ನಿಟ್ಟಿದ್ದಾರೆ.
ಪ್ರಧಾನಿ ಇಂದು ಎರಡನೇ ಬಾರಿ ದೇಶ ಉದ್ದೇಶಿಸಿ ಮಾತನಾಡುವ ಮುನ್ನ ಟ್ವಿಟರ್ ಮೂಲಕ ತಮ್ಮ ಬೇಡಿಕೆಯಿಟ್ಟಿರುವ ರಾಹುಲ್ ಗಾಂಧಿ, ತಕ್ಷಣದಿಂದ ಜಾರಿಗೆ ಬರುವಂತೆ ಹಣ ವಿತ್ ಡ್ರಾ ಮಿತಿಯನ್ನು ತಕ್ಷಣ ರದ್ದುಗೊಳಿಸಬೇಕು ಮತ್ತು ಪ್ರತಿ ಬಿಪಿಎಲ್ ಕಟುಂಬದ ಮಹಿಳೆಯ ಖಾತೆಗೆ 25 ಸಾವಿರ ರುಪಾಯಿ ಜಮೆ ಮಾಡುವಂತೆ ಒತ್ತಾಯಿಸಿದ್ದಾರೆ.
ನವೆಂಬರ್ 8ರಂದು 500 ಹಾಗೂ 1000 ರುಪಾಯಿ ನೋಟ್ ನಿಷೇಧ ಮಾಡಿದ ಮೋದಿಯ ಮುಂದೆ ಎಂಟು ಬೇಡಿಕೆಗಳನ್ನು ಪ್ರಸ್ತಾಪಿಸಿರುವ ರಾಹುಲ್, 50 ದಿನ ಕಳೆದರೂ ನಗದ್ದು ಬಿಕ್ಕಟ್ಟಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಹಣಕ್ಕಾಗಿ ಜನ ಈಗಲೂ ಪರದಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಡಿಜಿಟಲ್ ಪಾವತಿ ಮೇಲಿನ ಶುಲ್ಕ ರದ್ದುಗೊಳಿಸಬೇಕು, ಸಣ್ಣ ಪ್ರಮಾಣದ ಅಂಗಡಿ ವ್ಯಾಪಾರಸ್ಥರ ಆದಾಯ ತೆರಿಗೆ ಮತ್ತು ಮಾರಾಟ ತೆರಿಗೆಯಲ್ಲಿ ಶೇ.50 ವಿನಾಯ್ತಿ ನೀಡಬೇಕು. ನೋಟ್ ನಿಷೇಧದ ನಂತರ ಬ್ಯಾಂಕ್ ಖಾತೆಯಲ್ಲೇ ಉಳಿದುಕೊಂಡಿರುವ ಗ್ರಾಹಕರ ಹಣಕ್ಕೆ ಶೇ.18ರಷ್ಟು ಬಡ್ಡಿ ನೀಡಬೇಕು, ಉದ್ಯೋಗ ಖಾತ್ರಿ ಯೋಜನೆಯ ದಿನಗೂಲಿ ವೇತನವನ್ನು ಡಬಲ್ ಮಾಡಬೇಕು ಎಂದು ಕಾಂಗ್ರೆಸ್ ನಾಯಕ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics