ಕೋಯಿಕ್ಕೋಡ್: ಕೇರಳದಲ್ಲಿ ಆಯೋಜಿಸಿದ್ದ ಜಾಗತಿಕ ಆಯುರ್ವೇದ ಉತ್ಸವಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಚಾಲನೆ ನೀಡಿದ್ದಾರೆ.
ಉತ್ಸವಕ್ಕೆ ಚಾಲನೆ ನೀಡಿ ನಂತರ ಮಾತನಾಡಿರುವ ಅವರು, ಆಯುರ್ವೇದ ಪ್ರಚಾರ ಹಾಗೂ ಸಾಂಪ್ರಾಯಿಕ ಆಯುರ್ವೇದದ ಔಷಧಿಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಭಾರತ ಸಂತರು ಹಾಗೂ ಸನ್ಯಾಸತ್ವಗಳ ಧೀರ್ಘಕಾಲಿಕ ಸಂಪ್ರದಾಯವನ್ನು ಹೊಂದಿರುವ ದೇಶವಾಗಿದ್ದು, ಆರೋಗ್ಯ ಸಂರಕ್ಷಣೆಗಾಗಿ ನಮ್ಮದೇ ಆದಂತಹ ವ್ಯವಸ್ಥೆಯನ್ನು ಹೊಂದಿದ್ದೇವೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಂರಕ್ಷಣೆಗಾಗಿ ನಮ್ಮ ಸಂಪ್ರದಾಯಿಕ ವ್ಯವಸ್ಥೆಗಳ ಬಗ್ಗೆ ಆಲೋಚಿಸುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ. ಈ ಬಗ್ಗೆ ಪ್ರತಿಯೊಬ್ಬರು ಅನ್ವೇಷಣೆಯಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಸಾಂಪ್ರಾದಾಯಿಕ ಆಯುರ್ವೇದ ಔಷಧಿಗಳು ಸ್ಥಳೀಯ ಗ್ರಾಮ ಪ್ರದೇಶದ ಜನರು ಹಾಗೂ ಸಮುದಾಯದ ಜನರಿಗೆ ಸುಲಭವಾಗಿ ದೊರಕುತ್ತಿದ್ದು, ಆರೋಗ್ಯ ಸಂರಕ್ಷಣೆಗಾಗಿ ಇವುಗಳ ಸಮಯ ಹಾಗೂ ಕಾಲಗಳನ್ನು ತಿಳಿದುಕೊಂಡು ಬಳಕೆ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ.